‘ಪೊಲೀಸ್, ಹೋಂ ಗಾರ್ಡ್, ಪೌರ ಕಾರ್ಮಿಕ’ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಮಹಾಮಾರಿ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ , ಪೌರ ಕಾರ್ಮಿಕರು, ಹೋಮ್ ಗಾರ್ಡ್, ಅಗ್ನಿಶಾಮಕ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ , ಪೌರ ಕಾರ್ಮಿಕರು ಹೋಮ್ ಗಾರ್ಡ್, ಅಗ್ನಿಶಾಮಕ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಗೂಡ್ ನ್ಯೂಸ್ ನೀಡಿದ್ದು, ವೈದ್ಯಕೀಯ ವಿಮೆ ಅಡಿಯಲ್ಲಿ ಒಳಪಡಿಸಿ, ಕರ್ತವ್ಯದ ಸಂದರ್ಭದಲ್ಲಿ ನಿಧನ ಹೊಂದಿದರೇ, ರೂ.30 ಲಕ್ಷದವರೆಗೆ ವಿಮೆ ಜಾರಿಗೆ ತಂದಿದೆ.

READ ALSO

ಈ ಕುರಿತಂತೆ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಯಂತೆ ಕೋವಿಡ್-19 ಕೆಲಸದಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ , ಪೌರ ಕಾರ್ಮಿಕರು ಹಾಗೂ ಹೋಮ್ ಗಾರ್ಡ್, ಅಗ್ನಿಶಾಮಕ ಸಿಬ್ಬಂದಿಗಳು ಮೃತರಾದಲ್ಲಿ ಈ ಕೆಲಸದಲ್ಲಿರುವವರಿಗೆ ಮನೋ ಸ್ಥೈರ್ಯ ಹೆಚ್ಚಿಸಲು ರೂ.30 ಲಕ್ಷ ಪರಿಹಾರ ಒದಗಿಸಲು ಸರ್ಕಾರವು ಮಂಜೂರಾತಿ ನೀಡಿದೆ ಎಂಬುದಾಗಿ ತಿಳಿಸಿದೆ.