ನಿಮಗೆ ಆಕರ್ಷಕ ಸ್ಮರಣಿಕೆಯನ್ನು ಹುಡುಕುವ ಹಂಬಲವೇ ಹಾಗಾದ್ರೆ ನವರಂಗ ಸ್ಮರಣಿಕಾಕ್ಕೆ ಭೇಟಿ ನೀಡಿ

ನಿಮ್ಮಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಬಂದ ಅತಿಥಿಗಳಿಗೆ ನೆನಪಲ್ಲಿ ಉಳಿಯಲು ಒಂದು ಸ್ಮರಣಿಕೆ ಬೇಕಾಗಿದೆ ಎಂದಿಟ್ಟುಕೊಳ್ಳಿ . ನಾವು ಕೊಡುವ ಸ್ಮರಣಿಕೆ ನಮ್ಮ ಕಲ್ಪನೆಯಂತೆ ಇರಬೇಕೆಂಬ ಅಪೇಕ್ಷೆ ಪಟ್ಟರೆ ಖಂಡಿತವಾಗಿ ನೀವು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸಮೀಪ ತಲೆಯೆತ್ತಿ ನಿಂತಿರುವ ನವರಂಗ್ ಸ್ಮರಣಿಕೆಗಳ ಮಳಿಗೆಗೆ ಭೇಟಿ ನೀಡಬಹುದಾಗಿದೆ.

ವಿಸ್ತಾರವಾದ ಮಳಿಗೆ, ನಗುಮೊಗದಿಂದ ಸ್ವಾಗತಿಸುವ ಶ್ರಮಿಕರು, ಒಳಹೋಗುತ್ತಿದ್ದಂತೆ ಕಣ್ಮಣ ತಣಿಸುವ ಚಿತ್ರ
ವೈಚಿತ್ರಗಳಿಂದ ಕೂಡಿದ ಸ್ಮರಣಿಕೆಗಳ ಬೃಹತ್ ಸಂಗ್ರಹ. ಅದರಲ್ಲೊಂದು ಆಯ್ಕೆ ಮಾಡಿ ಮುಂದಡಿ ಇಟ್ಟಾಗ ಸದಾ ಹಸನ್ಮುಖದಿಂದ ಬರಮಾಡಿಕೊಳ್ಳುವ ಮಲ್ಯರು. ಹೌದು ನವರಂಗ್ ಎಂಬ ಬಿ.ಸಿ ರೋಡಿನ ಅದ್ಭುತ ಸ್ಮರಣಿಕೆಗಳ ಅಗಾಧ ಆಯ್ಕೆ ಮಳಿಗೆಯ ಕೇಂದ್ರ ಶಕ್ತಿ ಮಲ್ಯರು .ಸದಾ ಹಸನ್ಮುಖಿ, ಯಾರು ಬಂದರೂ ಸತ್ಕರಿಸಿ ಕೂರಿಸಿ ಮಾತನಾಡುವ ಔದಾರ್ಯ . ಎಲ್ಲವನ್ನೂ ನಗುತ್ತ ವಿವರಿಸುವ ಜಾದುಗಾರ. ನಿಮ್ಮ ಆಯ್ಕೆಯಲ್ಲದೆ ನಿಮ್ಮ ಮನದಲ್ಲಿರುವ ಕಲ್ಪನೆಗಳಿಗೂ ಬಣ್ಣ ಹಚ್ಚಿ ಸ್ಮರಣಿಕೆ ತಯಾರಿಸುವ ಮಾಂತ್ರಿಕ ಅವರು. ಕೇವಲ ವ್ಯಾಪಾರ ದೃಷ್ಟಿ ಮಾತ್ರವಲ್ಲದೆ, ಮಾನವೀಯತೆ , ಸಮಾಜಮುಖಿ , ಸಾಧನಶೀಲ ವ್ಯಕ್ತಿತ್ವ ಅವರದ್ದು . ಪ್ರಕೃತಿ ಪ್ರಿಯರಾದ ಮಲ್ಯರು ಪ್ರತಿ ಭಾನುವಾರ ಒಂದಿಲ್ಲೊಂದು ಪ್ರಕೃತಿ ಶಿಬಿರಗಳಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ತುಳುನಾಡಿನ ಹಣ್ಣುಗಳ ರಾಜ ಹಲಸಿನ ಬಗ್ಗೆ ವಿಶೇಷ ವ್ಯಾಮೋಹ ಹೊಂದಿರುವ ಇವರು ಬಂಟ್ವಾಳದಲ್ಲಿ ಹಲಸು ಮೇಳವನ್ನು ಸಂಯೋಜಿಸಿದವರಲ್ಲಿ ಓರ್ವರು . ಆಸ್ಟ್ರೇಲಿಯಾದ ಖ್ಯಾತ ಹಣ್ಣು ತಜ್ಞ ಕೆನ್ ಲವ್ ಜೊತೆಗೆ ಸಂಪರ್ಕವಿರುವ ಮಲ್ಯರು ಶ್ರೀ ಪಡ್ರೆಯವರ ನಿಕಟವರ್ತಿಗಳು.

READ ALSO


ಬಡತನದೊಂದಿಗೆ ಬಂಟ್ವಾಳದಲ್ಲಿ ಜನಿಸಿದ ಮೌನೇಶ್ ಮಲ್ಯರು, ಎಸ್ವಿಎಸ್ ಪ್ರೌಢ ಶಾಲೆ ಮತ್ತು ಕಾಲೇಜು ಬಂಟ್ವಾಳದಲಿೢ ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು. ಶಿಕ್ಷಣದ ನಂತರ ನಾಲ್ಕು ವರ್ಷಗಳ ಕಾಲ ವ್ಯಂಗ್ಯಚಿತ್ರಕಾರರಾಗಿ 2000 ಕ್ಕಿಂತಲೂ ಅಧಿಕ ವ್ಯಂಗ್ಯಚಿತ್ರಗಳನ್ನು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದವರು .ನಂತರದ ದಿನಗಳಲ್ಲಿ ಮಲ್ಯರು ನಾಟಕ ರಂಗದ ಮೇಕಪ್ ಕಲಾವಿದರಾಗಿ ಸುಮಾರು ವರ್ಷ ರಂಗಭೂಮಿಯಲ್ಲಿ ದುಡಿದು, ನಂತರ ಸಣ್ಣ ಮಟ್ಟದಲ್ಲಿ ಬಿಸಿ ರೋಡಿನಲ್ಲಿ ನವರಂಗ್ ಎಂಬ ಸ್ಮರಣಿಕೆಗಳ ಮಳಿಗೆಯನ್ನು ಆರಂಭಿಸಿದರು. ಈಗಿದು ಸ್ಮರಣಿಕೆಗಳ ತಯಾರಿಯ ಲೋಕದಲ್ಲಿ ನವರಂಗ್ ಒಂದು ದೊಡ್ಡ ಹೆಸರು. ದಕ್ಷಿಣ ಕನ್ನಡ, ಉಡುಪಿ , ಕಾಸರಗೋಡು, ಹಾಸನ, ಚಿಕ್ಕಮಗಳೂರು ಅಲ್ಲದೆ ಮುಂಬಯಿ , ಅಬುಧಾಬಿಯಲ್ಲಿ ತನ್ನ ನವರಂಗಿನ ಸ್ಮರಣಿಕೆಗಳ ಘಮಲವನ್ನು ಹಂಚಿದ್ದಾರೆ .ಏನೇ ಆಗಲಿ ಮೌನೇಶ್ ಮಲ್ಯರ ನೆನಪಿನ ಕಾಣಿಕೆಗಳು ನೂರಾರು ವರ್ಷ ನೆನಪಿನಲ್ಲಿ ಉಳಿಯುವಂತಾಗಲಿ.. ನಿಮಗೇನಾದರೂ ಬಿಡುವಿದ್ದರೆ ಸ್ಮರಣಿಕೆಗಳು ಬೇಕೆನಿಸಿದರೆ ದಯವಿಟ್ಟು ಬಿಸಿರೋಡಿನಿಂದ ಮುಂದೆ ಪಾಣೆಮಂಗಳೂರು ಸಮೀಪವಿರುವ ನವರಂಗ ಸ್ಮರಣಿಕಾಕ್ಕೆ ತಪ್ಪದೆ ಭೇಟಿ ನೀಡಿ ..
ಶುಭ ಹಾರೈಕೆಯೊಂದಿಗೆ,

ಬರಹ: 🖊️ ಹರೀಶ್ ಮಂಜೊಟ್ಟಿ, ಪೆರಾಜೆ, ಬಂಟ್ವಾಳ.