“ನಾನು ನನ್ನ ತುಳುನಾಡು”

🖊️ಪ್ರವೀಶ್ ಕುಲಾಲ್ ಬೀರಿಕುಂಜ


ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡ ದಲ್ಲಿ ಬರೆಯಲು ತೀರ್ಮಾನಿಸಿದೆ ಯಾಕೆಂದರೆ “ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿಸುತ್ತಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ” ಈ ಕಾರಣಕ್ಕಾಗಿ ಕರ್ನಾಟಕದ ನನ್ನ ಕನ್ನಡಿಗ ಸ್ನೇಹಿತರೂ ನನ್ನ ಈ ಪುಟ್ಟದಾದ ಲೇಖನವನ್ನು ಓದಲಿ ಎಂದು ಖುಷಿಯಿಂದ ಬರೆಯುತ್ತಿದ್ದೇನೆ.

READ ALSO

ಉತ್ತರದ ಬಾರ್ಕೂರಿನಿಂದ ದಕ್ಷಿಣದ ನೀಲೇಶ್ವರದ ವರೆಗೆ ಸ್ವಚ್ಚಂದವಾದ ಹಸಿರು ವನಸಿರಿಯಿಂದ ಕಂಗೊಲಿಸುತ್ತಿದೆ ನನ್ನ ತುಳುನಾಡು. ಕಲೆ ಕಾರ್ಣಿಕಗಳಿಂದ ಮೆರೆಯುತ್ತಿದೆ. ಯಕ್ಷಗಾನ ಕೋಲ ಕಂಬುಲಗಳ ತವರೂರು ದೈವ ದೇವರುಗಳು ನೆಲೆಯಾಗಿರುವ ಪುಣ್ಯದ ಮಣ್ಣು ತುಳುನಾಡು. ವೀರರಾದ ಅಗೊಳಿ ಮಂಜಣ್ಣ ಹಾಗು ಕಾರಣಿಕದ ವೀರ ಪುರುಷರಾದ ಕೊಟಿ ಚನ್ನಯರು, ದೇವುಪೂಂಜರಂತಹ ಕಾರ್ಣಿಕ ಪುರುಷರು ರ್ಧರ್ಮ ನಿಷ್ಠೆ ಯಿಂದ ಮೆರೆದ ಪುಣ್ಯದ ಮಣ್ಣು ಇದು. ಸ್ತೀಪ್ರಧಾನವಾದ ಚೌಕಟ್ಟಿನಲ್ಲಿ ಎಲ್ಲಾ ಸಂಪ್ರದಾಯಗಳು ಇಲ್ಲಿನದ್ದು. ಇತರರಿಗೆ ಚಂದ್ರೊದಯದ ಅಮಾವಾಸ್ಯೆ ಯ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾದರೆ ತುಳುನಾಡಿಗರಿಗೆ ಸೂರ್ಯೋದಯ ಸಂಕ್ರಮಣ ದ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾಗುತ್ತದೆ ತಿಂಗಳ ಸಂಕ್ರಮಣದಂದು ತುಳುನಾಡಿನಲ್ಲಿ ತಿಂಗಳು ಬದಲಾಗುತ್ತದೆ ಸೌರಮಾನ ಯುಗಾದಿ (ಬಿಸು ಪರ್ಬ) ತುಳುನಾಡಿಗೆ ಹೊಸ ವರ್ಷ.

ವಿಭಿನ್ನ ಆಚರಣೆ ವಿಭಿನ್ನ ಸಂಸ್ಕೃತಿ ತುಳುನಾಡಿನದ್ದು ಭಾರತ ದ ಇತರ ಹಲವು ರಾಜ್ಯಗಳಲ್ಲಿ ಪುರುಷ ಪ್ರದಾನ ಪದ್ಧತಿಯಲ್ಲಿ ಮದುವೆಯಾಗಿ ಹೋದ ಹೆಣ್ಣು ಗಂಡನ ಕುಟುಂಬವನ್ನು ಸೇರುತ್ತಾಳೆ ಮತ್ತೆ ಅವಳಿಗೆ ತಾಯಿಮನೆಯ ಯಾವ ಹಕ್ಕೂ ಇರುವುದಿಲ್ಲ ಈ ಪದ್ಧತಿ ಗೆ “ಮಕ್ಕಳ ಕಟ್ಟ್” ಎಂಬ ಹೆಸರೂ ಇದೆ ಆದರೆ ತುಳುನಾಡಿನಲ್ಲಿ ಇದರ ತದ್ವಿರುಧವಾಗಿ “ಅಳಿಯಕಟ್ಟ್” ಅಥವಾ ಅಪ್ಪೆ ಕಟ್ಟ್ ಎಂಬ ಪದ್ಧತಿಯಲ್ಲಿ ತಾಯಿಮನೆಯ ಎಲ್ಲಾ ಹಕ್ಕನ್ನು ಮದುವೆಯಾಗಿ ಹೋದ ಹೆಣ್ಣೆ ಹೊಂದಿರುತ್ತಾಳೆ ತಾಯಿಮನೆಯ ಆಸ್ತಿಪಾಲು ಅಂತ ಬಂದಾಗ ಆ ಮನೆಯ ಗಂಡುಮಕ್ಕಳಿಗಿರುವ ಸಮಾನ ಪಾಲನ್ನು ಅವಳಿಗೂ ನೀಡಲಾಗುತ್ತದೆ ಇಂತಹ ಸ್ತ್ರೀ ಗೆ ಮಹತ್ವದ ಸ್ಥಾನವನ್ನು ತುಳುನಾಡಿನಲ್ಲಿ ಅಲ್ಲದೆ ಬೇರೆ ಎಲ್ಲೂ ಇಂತಹ ಮೂಲ ಪದ್ದತಿಯನ್ನು ನೋಡಲು ಸಾಧ್ಯವಿಲ್ಲ.

ಇನ್ನು ಆರಾಧನೆ ಯ ವಿಚಾರಕ್ಕೆ ಬಂದರೆ “ದೇವರಿಗಿಂತ ದೈವಗಳಿಗೆ ಹೆಚ್ಚಿನ ಆರಾಧನಾ ಪದ್ದತಿ ತುಳುನಾಡಿನಲ್ಲಿ ಕಾಣಸಿಗುತ್ತದೆ” ದೇವರಿಗೆ ಸಂಸ್ಕೃತ ಭಾಷೆ ಯಲ್ಲಿ ಇರುವ ಶ್ಲೋಕಗಳಿಂದ ಪೂಜೆ ಪುರಸ್ಕಾರಕ್ಕೆ ಪ್ರಾಧನ್ಯತೆ ನೀಡಿದರೆ ತುಳುನಾಡಿನಲ್ಲಿ ಕಾರ್ಣಿಕ ಮೆರೆಯುತ್ತಿರುವ ದೈವಗಳಿಗೆ “ತುಳುನಾಡಿನ ಆಡುಭಾಷೆ ತುಳುವಿನಲ್ಲೇ ಸಂಧಿ ಪಾಡ್ದನಗಳ ಮೂಲಕ ದೈವಾರಾಧನೆದ ಗೆ ಪ್ರಾಧಾನ್ಯತೆಯ
ನ್ನು ನೀಡಲಾಗುತ್ತದೆ”.

ಸುಂದರವಾದ ಸಂಸ್ಕೃತಿ ಹಾಗು ಪ್ರಾಕೃತಿಕ ಸಂಪತ್ತು ಸೌಂದರ್ಯದಿಂದ ಮೆರೆಯುತ್ತಿರುವ ತುಳುನಾಡು ಇನ್ನು ಮುಂದೆಯೂ ತುಳುನಾಡಿನ ದೈವ ದೇವರುಗಳ ಕೃಪೆಯಿಂದ ಶ್ರೀಂತವಾಗಿ ವಿಶ್ವಕ್ಕೆ ಮಾದರಿಯಾಗಿ ಮೆರೆಯಲಿ ಎಂಬುದೇ ನನ್ನ ಆಶಯ.

✍️ಪ್ರವೀಶ್ ಕುಲಾಲ್ ಬೀರಿಕುಂಜ