ಜೈ ತುಳುನಾಡ್ (ರಿ.) ಸಂಘಟನೆಯಿಂದ ಉಡುಪಿಯ ಸ್ವಾಗತ ಗೋಪುರದಲ್ಲಿ ತುಳು ಲಿಪಿಯ ನಾಮಫಲಕ ಹಾಕುವಂತೆ ಶಾಸಕರಾದ ಶ್ರೀ ರಘುಪತಿ ಭಟ್‌ರಿಗೆ ಮನವಿ

ಉಡುಪಿ: ತುಳು ಭಾಷೆಗೆ ತನ್ನದೇ ಆದ ಸ್ವಂತ ಲಿಪಿ ಇದ್ದು ಈ ಲಿಪಿಯನ್ನು ಸಾವಿರಾರು ಜನರು ಈಗಾಗಲೇ ಕಲಿಯುತ್ತಿದ್ದಾರೆ. ತುಳುಲಿಪಿಯ ಉಳಿವಿನಲ್ಲಿ ಉಡುಪಿ ಜಿಲ್ಲೆಯು ಮಹತ್ತರವಾದ ಪಾತ್ರವನ್ನು ಹೊಂದಿದ್ದು ಮಠದಲ್ಲಿ ಈಗಲೂ ಬಳಕೆಯಲ್ಲಿದೆ. ತುಳು ಲಿಪಿ ಮತ್ತು ತುಳು ಭಾಷೆಯ ಪ್ರಾಚೀನ ಗ್ರಂಥವಾದ ಮಹಾಭಾರತೊ ಎಂಬ ಮಹಾ ಗ್ರಂಥವನ್ನು ಬರೆದವರು ಉಡುಪಿ ಜಿಲ್ಲೆಯವರು. ಹೀಗಾಗಿ ತುಳುಲಿಪಿಯ ಪ್ರೋತ್ಸಾಹಕ್ಕಾಗಿ ಮತ್ತು ಪುನಶ್ಚೇತನಕ್ಕಾಗಿ ತುಳುಲಿಪಿಯ ನಾಮಫಲಕವನ್ನು ಉಡುಪಿಯ ಸ್ವಾಗತ ಗೋಪುರದಲ್ಲಿ ಹಾಕಬೇಕೆಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಘುಪತಿ ಭಟ್‌ರಲ್ಲಿ ಜೈ ತುಳುನಾಡ್ (ರಿ.) ಸಂಘಟನೆಯು ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಮನವಿ ಮಾಡಿತು.
ಈ ಸಂಧರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್, ಶ್ರೀಮತಿ ತಾರ ಉಮೇಶ್ ಆಚಾರ್ಯ, ಜೈ ತುಲುನಾಡ್ (ರಿ.) ಸಂಘಟನೆಯ ಅಧ್ಯಕ್ಷರಾದ ಶ್ರೀ ಸುದರ್ಶನ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸದಾಶಿವ ಮುದ್ರಾಡಿ, ಟೈಮ್ಸ್ ಆಫ್ ಕುಡ್ಲದ ಶ್ರೀಮತಿ ಯಶೋಧ ಕೇಶವ್ ಉಪಸ್ಥಿತರಿದ್ದರು.

READ ALSO