ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಿಲಿಯಂದೊಟ್ಟು ನಿವಾಸಿ ಲೋಕಯ್ಯ ಪೂಜಾರಿ ಇವರ ಧರ್ಮಪತ್ನಿ ಶ್ರೀಮತಿ ವನಿತಾ ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಈ ಕುಟುಂಬಕ್ಕೆ ಇಂದು ಬ್ರಹ್ಮಶ್ರೀ ವಾಟ್ಸಾಪ್ ಗ್ರೂಪಿನ ಸದಸ್ಯರಿಂದ ಸಂಗ್ರಹಿಸಿದ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು, ಈ ಸಂಧರ್ಭದಲ್ಲಿ ಬ್ರಹ್ಮಶ್ರೀ ಗುಂಪಿನ ಅಡ್ಮಿನ್ ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಬೆಳ್ತಂಗಡಿಯ ಇಂಜಿನಿಯರ್ ಶೈಲೇಶ್ ಆರ್ ಜೆ ಹಾಗೂ ಗುರುರಾಜ್ ಪೂಜಾರಿ ಗುರಿಪಳ್ಳ ಉಪಸ್ಥಿತಿತರಿದ್ದರು.
ಬೆಳ್ತಂಗಡಿಯ ವೇಣೂರಿನಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ನೀರುಪಾಲು
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂಬವರಾಗಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ…