ಕೊರೋನಾ ಆರ್ಭಟಕ್ಕೆ ಕರುನಾಡು ತತ್ತರ, ರಾಜ್ಯದಲ್ಲಿಂದು 248 ಸೋಂಕಿತರ ಪತ್ತೆ

ಬೆಂಗಳೂರು : ಕೊರೋನಾ ಮಹಾಮಾರಿ ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು ಇಂದು ಒಂದೇ ದಿನ ಬರೋಬ್ಬರಿ 248 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ, ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದ್ದು, ಮಹಾಮಾರಿ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ರಾಜ್ಯಾದ್ಯಂತ 17 ಜಿಲ್ಲೆಗಳಲ್ಲಿ ಕೊರೋನ ವಕ್ರದೃಷ್ಠಿ ಬಿದ್ದಿದ್ದು ರಾಯಚೂರು,ಕಲಬುರ್ಗಿ,ಯಾದಗಿರಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು ಕೃಷ್ಣಾನಗರಿ,ಹಾಗೂ ರಾಜ್ಯರಾಜಧಾನಿಯಲ್ಲೂ ಕೊರೋನಾ ಆರ್ಭಟ ಮುಂದುವರಿದಿದೆ.

READ ALSO

ಇಂದಿನ 248 ಸೋಂಕಿತರ ಪೈಕಿ 220 ಮಂದಿ ವಿದೇಶ ಹಾಗೂ ಹೊರ ರಾಜ್ಯ ಹಿಂದಿರುಗಿದವರಾಗಿರುತ್ತಾರೆ.

ಕೊರೋನಾ ಮರಣಮೃದಂಗಕ್ಕೆ ಚಿಕ್ಕಬಳ್ಳಾಪುರದ 50ವರ್ಷದ ಮಹಿಳೆ ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು:-

ರಾಯಚೂರು 62
ಕಲಬುರ್ಗಿ 61
ಯಾದಗಿರಿ 60
ಉಡುಪಿ 15
ಬೆಂಗಳೂರು 13
ಬಳ್ಳಾರಿ 09
ಚಿಕ್ಕಬಳ್ಳಾಪುರ 05
ದಾವಣಗೆರೆ 04
ವಿಜಯಪುರ 04
ಹಾಸನ 04
ತುಮಕೂರು 02
ಮಂಡ್ಯ 02
ಚಿಕ್ಕಮಗಳೂರು02
ಮೈಸೂರು 02
ಶಿವಮೊಗ್ಗ 01
ಚಿತ್ರದುರ್ಗ 01
ಧಾರವಾಡ 01