ರಾಜ್ಯದಲ್ಲಿ ಇಂದಿನಿಂದ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್ ಲಭ್ಯ, ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಿದ ರಾಜ್ಯ ಸರಕಾರ!!!!!!

ಬೆಂಗಳೂರು : ಕೊರೊನಾ ಸೊಂಕಿತರ ವಿವರಣೆಗಳ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಿ ದಿನಕ್ಕೆ ಒಂದೇ ಬಾರಿ ಬುಲೆಟಿನ್ ನೀಡಲು ಚಿಂತನೆ ನಡೆಸಲಾಗಿದ್ದು ಇಂದಿನಿಂದ ಸಂಜೆ ಮಾತ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

READ ALSO

ಕೊರೊನಾ ಸೋಂಕಿತರು, ಗುಣಮುಖರಾದವರ ಬಗ್ಗೆ ಇಲ್ಲಿವರೆಗೂ ರಾಜ್ಯ ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿತ್ತು.

ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಇತರೇ ರಾಜ್ಯಗಳಂತೆಯೇ ಮಧ್ಯಾಹ್ನದ ಬುಲೆಟಿನ್ ಬಿಡುಗಡೆ ಮಾಡದಿರಲು ಟಾಸ್ಕ್ ಫೋರ್ಸ್ ನಿರ್ಧರಿಸಿದೆ.