ಬೆಂಗಳೂರು : ಕೋವಿಡ್ 19 ಸೋಂಕಿನಿಂದಾಗಿ ರಾಜ್ಯದ 15 ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಕಳೆದ ಕೆಲ ದಿನದಿಂದಲೂ ಶತಕದ ಗಡಿದಾಟುತ್ತಿದ್ದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಬರೋಬ್ಬರಿ 299 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸಿದೆ. ರಾಯಚೂರು, ಯಾದಗಿರಿ, ಬೀದರ್,ಕಲಬುರ್ಗಿ, ಹಾಗೂ ಕರಾವಳಿಗೆ ಕೊರೋನಾ ಬಿಗ್ ಶಾಕ್ ಕೊಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿದಾಟಿ ಮುನ್ನುಗ್ಗಿದೆ.
ರಾಜ್ಯದಲ್ಲಿ ಇಂದು ದಾಖಲೆಯ 299 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ.
ಅನ್ಯ ರಾಜ್ಯದ ಪ್ರಯಾಣಿಕರಿಂದ ಹೆಚ್ಚಿನ ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದಿರುವ ಪ್ರಯಾಣಿಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢವಾಗುತ್ತಿದೆ.
299ಸೋಂಕಿತರ ಪೈರಿ 262ಜನ ವಿದೇಶ ಹಾಗೂ ಹೊರ ರಾಜ್ಯದಿಂದ ಬಂದವರಾಗಿರುತ್ತಾರೆ.
ಇಂದು ಕೊರೋನಾ ಮರಣಮೃದಂಗಕ್ಕೆ ರಾಯಚೂರುನಲ್ಲಿ50 ವರ್ಷದ ಪುರುಷ, ಬೀದರ್ ನಲ್ಲಿ75 ವರ್ಷದ ಪುರುಷ ಬಲಿಯಾಗಿದ್ದು ಸಾವಿನ ಸಂಖ್ಯೆ51ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಸೋಂಕಿತರ ವಿವರ:-
ರಾಯಚೂರು 83
ಯಾದಗಿರಿ 44
ಬೀದರ್ 33
ಕಲಬುರ್ಗಿ 28
ವಿಜಯಪುರ 26
ಬೆಂಗಳೂರು 21
ದಕ್ಷಿಣಕನ್ನಡ 14
ಬೆಳಗಾವಿ 13
ಮಂಡ್ಯ 13
ಉಡುಪಿ 10
ದಾವಣಗೆರೆ 06
ಉತ್ತರಕನ್ನಡ 05
ಬಳ್ಳಾರಿ 01
ಶಿವಮೊಗ್ಗ 01
ಕೋಲಾರ 01