ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಭಾರಿ ವರ್ಷಧಾರೆಯಾಗಿದ್ದು ಕಳೆದ ವರ್ಷದಂತೆ ಈ ಭಾರಿಯೂ ಬೆಳ್ತಂಗಡಿ ಭಾಗದಲ್ಲಿ ಪ್ರವಾಹದ ಆತಂಕ ಉಂಟಾಗಿದೆ.
ಬೆಳ್ತಂಗಡಿಯ ಕಾಜೂರು, ಕೊಲ್ಲಿ ಮತ್ತು ದಿಡುಪೆ ಭಾಗದಲ್ಲಿ ಭಾರೀಮಳೆಯಾಗಿದ್ದು ಇದರ ಪರಿಣಾಮವಾಗಿ ನದಿಗಳೆಲ್ಲ ಉಕ್ಕಿ ಹರಿದಿದೆ
ನನಗೆ ಕಳೆದ ವರ್ಷದ ಅತಿವೃಷ್ಟಿ ಭೂ ಕುಸಿತವನ್ನು ನೆನಸಿ ಮತ್ತೆ ಭಯ ಮೂಡಿಸಿದ ಇಂದಿನ ಮಳೆ ಹಳೇ ನೆನಪುಗಳನ್ನು ಮೇಲುಕು ಹಾಕಿದಂತಿತ್ತು. ಸಂಜೆಯ ವೇಳೆಯಲ್ಲಿ ಸುರಿದ ಮಳೆಗೆ ಕೊಲ್ಲಿ , ಕುಕ್ಕಾವು ಪ್ರದೇಶದಲ್ಲಿ ಭಾರಿ ನೀರಿನೊಂದಿಗೆ ಒಳಹರಿವು ಪ್ರವಾಹದಂತೆ ಬಂದಂತಾಗಿದ್ದು ಮೊದಲ ಮಳೆಯೇ ಇಷ್ಟೋಂದು ಭೀಕರತೆ ಇದ್ದು ಮುಂದಿನ ದಿನಗಳಲ್ಲಿ ಯಾವರೀತಿ ಆಗಬಹುದೆಂದು ನನಗೆ ಸೇರಿದಂತೆ ಸ್ಥಳೀಯ ಜನರಿಗೂ ಕ್ಷಣಕಾಲದ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯರಾದ ವಾಸುದೇವರಾವ್ ಕಕ್ಕೆನೇಜಿ,ಕುಕ್ಕಾವು ಹಂಚಿಕೊಂಡಿದ್ದಾರೆ.
ಕಳೆದ ವರ್ಷವೂ ಭಾರಿ ಮಳೆ ಪ್ರವಾಹದಿಂದ ನದಿ ತುಂಬಿ ಹರಿದು ನದಿಯ ಚಿತ್ರಣವೇ ಬದಲಾಗಿತ್ತು ಭಾರಿ ಪ್ರಮಾಣದಲ್ಲಿ ಮರಳು ಕಲ್ಲುಗಳು ನದಿಯ ಆಳವನ್ನು ಮುಚ್ಚಿಹೋಗಿದ್ದು ಸುಮಾರು 20 ಅಡಿ ಆಳದ ನದಿಯೂ ಪ್ರಸ್ತುತ 7-8 ಅಡಿಯಷ್ಟು ಮಾತ್ರ ಇದ್ದು ಭಾರಿ ಮಳೆಗೆ ತನ್ನ ಪಥವನ್ನು ಬೀಟ್ಟು ಬೇರೆಡೆ ದಿಕ್ಕು ಬದಾಲಾಯಿಸಿ ನದಿ ನೀರು ಹರಿದರು ಅಚ್ಚರಿಯಿಲ್ಲ ಸಣ್ಣ ಪ್ರಮಾಣದ ಮಳೆ ಬಂದರು ನದಿ ಉಕ್ಕಿ ಹರಿಯುವ ಸಾಧ್ಯತೆ ಇದೆ.