ಅರ್ಹ ಬಡ ಕುಟಂಬಗಳಿಗೆ ಅಗತ್ಯ ಆಹಾರ ವಸ್ತುಗಳ ವಿತರಣೆ ಮಾಡಿ ಮಾದರಿಯಾದ ಲಯನ್ಸ್ ಕ್ಲಬ್ ಬೆಳ್ತಂಗಡಿ

ಬೆಳ್ತಂಗಡಿ: ಸದಾ ಸಾಮಾಜಿಕ ಸದಾ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನ ವಿವಿಧೆಡೆ ಸುಮಾರು 27 ಅರ್ಹ ಕುಟುಂಬಗಳಿಗೆ ಅಕ್ಕಿ ಹಾಗೂ ಅಗತ್ಯ ದಿನಸಿಸಾಮಾಗ್ರಿಗಳ ಆಹಾರ ವಸ್ತುಗಳನ್ನು ವಿತರಿಸಲಾಯಿತು.

10 ಕೆ.ಜಿ ಕುಚಲಕ್ಕಿ, 500 ಗ್ರಾಂ ಚಾಹುಡಿ, 1 ಕೆ.ಜಿ ಸಕ್ಕರೆ, 500 ಗ್ರಾಂ ಬೇಳೆ, 1 ಕೆ.ಜಿ ಈರುಳ್ಳಿ, 25೦ ಗ್ರಾಂ ಮೆಣಸಿನ ಹುಡಿ, 1ಕೆ.ಜಿ ಟೊಮ್ಯಾಟೋ, 1 ಲೀ. ಎಣ್ಣೆ, 2 ಕೆ.ಜಿ ಉಪ್ಪು ಮತ್ತು 1ಕೆ.ಜಿ ರವೆ ಸೇರಿ ಹೀಗೆ ಒಟ್ಟು 940.ಮೊತ್ತಗಳ ಜೀವನೋಪಾಯದ ಆಹಾರ ವಸ್ತುಗಳನ್ನು ನೀಡಲಾಯಿತು.

READ ALSO

ಲಯನ್ಸ್ ಕ್ಲಬ್ ಅಧ್ಯಕ್ಷ, ಶ್ರದ್ಧಾ ಎಂಟರ್ ಪ್ರೈಸಸ್ ಮಾಲಕ ವಸಂತ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.