ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಕೊರೋನಾ ಜಾಗೃತಿ ಮೂಡಿಸಿ,ಮಾಸ್ಕ್ ವಿತರಿಸಿ ಮಾದರಿಯಾದ SDMಕಾಲೇಜು ವಿದ್ಯಾರ್ಥಿನಿ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸವಣಾಲು ಹಾಲು ಉತ್ಪಾದಕರ ಸಂಘದ ಸದಸ್ಯ ಮತ್ತು ಸ್ಥಳೀಯ ವ್ಯಾಪಾರಿ ರವಿಪೂಜಾರಿಯವರ ಮಗಳು ಎಸ್.ಡಿ.ಯಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆಕರ್ಶರವರು ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಮಾಸ್ಕ್ ವಿತರಿಸುವ ಮೂಲಕ ಕೊರೋನ ಜಾಗೃತಿಯನ್ನು ಮೂಡಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಸರ್ಕಾರ , ಆರೋಗ್ಯ ಸಂಸ್ಥೆಗಳು ಮತ್ತು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೊರೋನಾ ಮಹಾಮಾರಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಇನ್ನು ಕೆಲವರು ಅದನ್ನು ಅರ್ಥ ಮಾಡಿಕೊಳ್ಳದೆ ಕೊರೋನಾ ರೋಗಿಗಳನ್ನು, ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬಂದು ಸರಕಾರಿ ಕ್ವಾರಂಟೈನ್ ನಿಯಮಗಳ ಅನ್ವಯ ಕಟ್ಟು ನಿಟ್ಟಿನ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನಿನಲ್ಲಿ ಇರುವವವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ವಕ್ರ ದ್ರಿಷ್ಟಿಯಿಂದ ನೋಡುತ್ತಿರುವಾಗ ವಿದ್ಯಾರ್ಥಿನಿಯೊಬ್ಬಳ ಸಾಮಾಜಿಕ ಬದ್ಧತೆಯನ್ನು ಊರಿನ ಜನ ಕೊಂಡಾಡಿದ್ದಾರೆ.

READ ALSO

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳದಡ್ಡ , ಉಪಾಧ್ಯಕ್ಷೆ ರೀಟಾ , ನಿರ್ದೇಶಕರುಗಳಾದ ಚಂದಪ್ಪ ಶೆಟ್ಟಿ ಹಂದಿಲಗುತ್ತು, ದಯಾನಂದ ರೈ ಕಡೆಮಜಲು,ರಂಜಿತ್ ನಾಯ್ಕ ಕುಕ್ಕುಜೆ ,ಶ್ರೀಮತಿ ಮೃದುಲಾ ಕುಂಟಲ್ದಾಡ್ಡ , ಶ್ರೀಮತಿ ಜಯಂತಿ ಕಟ್ಟದಬೈಲು , ಶ್ರೀಮತಿ ಚಂದ್ರಾವತಿ ಕೋಡಿಮುಗೇರು ,ಹೊನ್ನಪ್ಪ ಹೆಗ್ಡೆ ಬೊಲ್ಲೊಟ್ಟು ಬೈಲು , ರಮೇಶ್ ಆಚಾರ್ಯ ನೇರಮೆ , ಕಾರ್ಯದರ್ಶಿ ಹರೀಶ್ ರೈ ಕಡೆಮಜಲು , ಹಾಲು ಪರೀಕ್ಷಕ ಸತೀಶ್ ಶೆಟ್ಟಿ , ರವಿ ಪೂಜಾರಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.