ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ರಾಜು ನಾಯ್ಕ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಕಳೆದ ಕೆಲವು ವರ್ಷಗಳಿಂದ ಪಡಂಗಡಿಯಲ್ಲಿ ಗ್ರಾಮಕರಣೀಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ನಾಯ್ಕರವರು ವಾಣಿಜ್ಯ ತೆರಿಗೆ ಸಹಾಯಕ ಅಯುಕ್ತರಾಗಿ ಬೆಂಗಳೂರಿನಲ್ಲಿ ಜೂನ್. 1 ರಂದು ಅಧಿಕಾರ ಸ್ವೀಕರಿಸಿದರು.

ಭಾರತಿಯ ಸೇನೆಯಲ್ಲಿ ಸೈನಿಕರಾಗಿ 23 ವರ್ಷಗಳ ಕಾಲ ದೇಶ ಸೇವೆ ಮಾಡಿ ವೃತ್ತಿಯಿಂದ ನಿವೃತ್ತರಾಗಿ ಪಡಂಗಡಿಯಲ್ಲಿ
ಗ್ರಾಮಕರಣೀಕರಾಗಿ ಕರ್ತವ್ಯ ನಿರ್ವಹಿಸುತ್ತಿದರು .ಕಳೆದ ಬಾರಿ ಕೆ.ಎ.ಎಸ್. ಪರೀಕ್ಷೆ ಎದುರಿಸಿ ದಕ್ಷಿಣ ಕನ್ನಡ, ಉಡುಪಿ ಉಭಯ ಜಿಲ್ಲೆಯಲ್ಲಿ ಓರ್ವರಾಗಿ ಉತ್ತಿರ್ಣಗೊಂಡು ಕಮರ್ಷಿಯಲ್ ಎಸಿಯಾಗಿ ನೇಮಕಗೊಂಡಿದ್ದಾರೆ. ಮೂಲತಃ ಇವರು ಹೊನ್ನಾವರ ತಾಲೂಕಿನ ಗುಂಡಬಾಳು ನಿವಾಸಿಯಾಗಿರುತ್ತಾರೆ.

READ ALSO