ಭಾರತೀಯ ಮಜ್ದೂರ್ ಸಂಘದ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಇದರ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವನ್ನು ಅಡಿಂಜೆಯಲ್ಲಿ ನಡೆಸಲಾಯಿತು.


ಈ ಸಂದರ್ಭದಲ್ಲಿ ನೂತನ BMS ಗ್ರಾಮ ಸಮಿತಿಯನ್ನು ‌ ರಚಿಸಲಾಯಿತು. ಅದ್ಯಕ್ಷರಾಗಿ ದಯಾನಂದ ಕುಲಾಲ್ ,ಕಾರ್ಯದರ್ಶಿಯಾಗಿ ಕರುಣಾಕರ ಅವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.

READ ALSO

BMS ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ ಬಿ.ಕೆ ರವರು ಕಾರ್ಮಿಕ ಸೌಲಭ್ಯಗಳ ಹಾಗೂ ಭಾರತೀಯ ಮಜ್ದೂರ ಸಂಘದ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಡಿಂಜೆ ಗ್ರಾಮ ಪಂಚಾಯತ್ ಅದ್ಯಕ್ಷರಾದ ಮೋಹನ್ ಅಡಿಂಜೆ ಮತ್ತು ಬಿ.ಎಮ್ ಎಸ್ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ಉಪಸ್ಥಿತರಿದ್ದರು