ಬೆಂಗಳೂರು: ರಾಜ್ಯಾದ್ಯಂತ ಇಂದು 20 ಜಿಲ್ಲೆಯಲ್ಲಿ ಮಹಾಮಾರಿ ವೈರಲ್ ವೈರಸ್ ಮತ್ತೆ ಕರುನಾಡನ್ನು ಕಾಡುತ್ತಿದ್ದು ಇಂದು378 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಕಡಲತಡಿಯ ಉಡುಪಿ ದಕ್ಷಿಣಕನ್ನಡದಲ್ಲೂ ಮಹಾಮಾರಿ ವೈರಸ್ ನ ಅಲೆಗಳು ಬೀಸಿದ್ದು ಕರಾವಳಿಗರನ್ನು ಕಂಗೆಡಿಸಿದೆ.
ಯಾದಗಿರಿ,ಕಲಬುರ್ಗಿ, ಬೆಂಗಳೂರಿನಲ್ಲೂ ಮಹಾಮಾರಿ ರುದ್ರನರ್ತನ ತಾಂಡವಾಡುತ್ತಿದ್ದು ರಾಜ್ಯಾದ್ಯಂತ ಐದು ಸಾವಿರದ ಗಡಿದಾಟಿ ಮುನ್ನುಗಿದೆ.
ಕರ್ನಾಟಕದಲ್ಲಿ ಇಂದು378ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ
378ಸೋಂಕಿತರ ಪೈಕಿ 341ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಬಂದವರಾಗಿರುತ್ತಾರೆ
ಬೀದರ್ ಹಾಗೂ ವಿಜಯಪುರದಲ್ಲಿ ಕೊರೋನಾ ಮಾಹಾಮಾರಿಗೆ ಇಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದೆ
ಜಿಲ್ಲಾವಾರು ಸೋಂಕಿತರ ವಿವರಗಳು:
ಉಡುಪಿ 121
ಯಾದಗಿರಿ 103
ಕಲಬುರ್ಗಿ 69
ದಕ್ಷಿಣಕನ್ನಡ 24
ಬೆಂಗಳೂರು 18
ವಿಜಯಪುರ 06
ದಾವಣಗೆರೆ 06
ಬೆಳಗಾವಿ 05
ಗದಗ 04
ಮಂಡ್ಯ 03
ಹಾಸನ 03
ಧಾರವಾಡ 03
ಹಾವೇರಿ 03
ಚಿಕ್ಕಬಳ್ಳಾಪುರ 02
ಉತ್ತರಕನ್ನಡ 02
ರಾಯಚೂರು 02
ಕೊಪ್ಪಳ 01
ಬೀದರ್ 01
ತುಮಕೂರು 01
ಕೋಲಾರ 01