ರಾಜ್ಯವನ್ನು ಬೆಂಬಿಡದೆ ಕಾಡುತ್ತಿದೆ ಮಹಾಮಾರಿ! ರಾಜ್ಯದ 18 ಜಿಲ್ಲೆಗಳಲ್ಲಿ 239 ಸೋಂಕಿತರ ಪತ್ತೆ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿಯು ಮತ್ತಷ್ಟು ಕಾಡುತಿದ್ದು ಇಂದು 239 ಹೊಸ ಪ್ರಕರಣಗಳು ದಾಖಲಾಗಿದೆ.

ಕಲಬುರ್ಗಿ, ಯಾದಗಿರಿ, ಬೆಳಗಾವಿ, ಬೆಂಗಳೂರು, ದಕ್ಷಿಣಕನ್ನಡ, ದಾವಣಗೆರೆ, ಉಡುಪಿ, ಶಿವಮೊಗ್ಗದಲ್ಲಿ ಎರಡಂಕಿಯ ಪ್ರಕರಣಗಳು ಕಾಣಿಸಿಕೊಂಡಿದೆ.
ಉಡುಪಿಯನ್ನು ಕಾಡುತ್ತಿದ್ದ ಮಾಹಾಮಾರಿ ಇಂದು ಸ್ವಲ್ಪ ಮಟ್ಟಿನ ರಿಲೀಫ್ ನ್ನು ನೀಡಿದೆ.

READ ALSO

ಬೆಂಗಳೂರಿನಲ್ಲಿ ಮಹಾಮಾರಿ ಮರಣಮೃದಂಗಕ್ಕೆ 2ಮಂದಿ ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ61ಕ್ಕೆ ಏರಿಕೆಯಾಗಿದೆ

ಕರ್ನಾಟಕದಲ್ಲಿ ಇಂದು 239ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ

239ರ ಪೈಕಿ 192 ಮಂದಿ ವಿದೇಶ ಹಾಗೂ ಹೊರ ರಾಜ್ಯ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು:-

ಕಲಬುರ್ಗಿ 39
ಯಾದಗಿರಿ 39
ಬೆಳಗಾವಿ 38
ಬೆಂಗಳೂರು 28
ದಕ್ಷಿಣಕನ್ನಡ 17
ದಾವಣಗೆರೆ 17
ಉಡುಪಿ 13
ಶಿವಮೊಗ್ಗ 12
ವಿಜಯಪುರ 09
ಬೀದರ್ 07
ಬಳ್ಳಾರಿ 06
ಹಾಸನ 05
ಧಾರವಾಡ 03
ಗದಗ 02
ಉತ್ತರಕನ್ನಡ 02
ಮಂಡ್ಯ 01
ರಾಯಚೂರು 01