ರಾಜ್ಯದ 2ಪದವೀಧರ, 2ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಮುಂದೂಡಿ, ಚುನಾವಣಾ ಆಯೋಗದ ಆದೇಶ!

ನವದೆಹಲಿ : ಜೂನ್30, 2020ರಂದು ಕರ್ನಾಟಕದ 2 ಪದವೀಧರ ಕ್ಷೇತ್ರ ಹಾಗೂ 2 ಶಿಕ್ಷಕರ ಕ್ಷೇತ್ರದ ಪರಿಷತ್ ಸ್ಥಾನಗಳ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿತ್ತು. ಇಂತಹ ಚುನಾವಣೆಯನ್ನು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮುಂದೂಡಿ, ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಜೂನ್ 30, 2020ರವರೆಗೆ ವಿಸ್ತರಣೆ ಮಾಡಲಾಗಿದ್ದು. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೆಚ್ಚು ಜನರು ಸೇರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರದ ಪರಿಷತ್ ಸ್ಥಾನಗಳ ಅವಧಿ ಕೊನೆಗೊಳ್ಳುತ್ತಿದೆ.

READ ALSO

ಆದ್ರೇ ಆರೋಗ್ಯ ತುರ್ತು ಪರಿಸ್ಥಿತಿ ಕೊರೋನಾ ಸೋಂಕಿನ ಭೀತಿಯಿಂದ, ಇಂತಹ ಸಂದರ್ಭದಲ್ಲಿ ಖಾಲಿಯಾಗುತ್ತಿರುವ ಕರ್ನಾಟಕದ 4 ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಸಲು ಅನುಕೂಲಕರವಲ್ಲದ ಸಂದರ್ಭವಿದೆ. ಹೀಗಾಗಿ ದಿನಾಂಕ 30-06-2020ರಂದು ಖಾಲಿಯಾಗಲಿದ್ದಂತ ಕರ್ನಾಟಕದ 2 ಪದವೀಧರ, 2 ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿ, ಆದೇಶ ಹೊರಡಿಸಿದೆ.