ಬೆಳ್ತಂಗಡಿ ತಾಲೂಕಿನಾದ್ಯಂತ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಮೊಬೈಲ್ ಅಂಗಡಿಯನ್ನು ತೆರೆಯಲು ಮಾಲಕರ ಒಮ್ಮತದ ತೀರ್ಮಾನ

ಬೆಳ್ತಂಗಡಿ: ಕೊರೋನಾ ಮಹಾಮಾರಿ ಸೋಂಕು ತಾಲೂಕಿನ ಕೆಲವೆಡೆ ಕಾಣಿಸಿಕೊಂಡಿದ್ದು ಈ ಪರಿಣಾಮವಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಮುಂದಿನ 15 ದಿನಗಳ ಕಾಲ ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸುವ ಬಗ್ಗೆ ಮೊಬೈಲ್ ಅಂಗಡಿ ಮಾಲಕರು ತೀರ್ಮಾನ ಕೈಗೊಂಡಿರುತ್ತಾರೆ.

READ ALSO

ಇಂದು ನಡೆದ ಮೊಬೈಲ್ ಮಾರಾಟಗಾರರ ಸಭೆಯಲ್ಲಿ ನಿರ್ಣಯಿಸಿ ದಂತೆ ನಾಳೆಯಿಂದ ಅಂದರೆ ದಿನಾಂಕ 27-05-2020 ರಿಂದ 10-06-2020 ವರೆಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಮೊಬೈಲ್ ಮೊಬೈಲ್ ಮಾರಾಟ ಮಳಿಗೆಗಳು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ತೆರೆಯಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ