ಕ್ವಾರೇಂಟೈನ್ ನಿಂದ ತಪ್ಪಿಸಿಕೊಳ್ಳುವ ಬದಲು ಸ್ವಯಂಪ್ರೇರಿತವಾಗಿ ಕ್ವಾರೆಂಟೈನ್ ಗೆ ಬನ್ನಿ: ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ

ಬೆಳ್ತಂಗಡಿ :  ಕೊರೋನಾ ಮಹಾಮಾರಿಯಿಂದಾಗಿ ಸೇವಾ ಸಿಂಧು ಆ್ಯಪ್ ಮೂಲಕ ಕರ್ನಾಟಕಕ್ಕೆ ಆಗಮಿಸುವ ಕೆಲವು ಜನ ಆ್ಯಪ್ ನಲ್ಲಿ ನಮೂದಿಸಿದ ಸ್ಥಳಕ್ಕೆ ಮೊದಲೇ ರೈಲುಗಳಿಂದ ಇಳಿದು ಕ್ವಾರೆಂಟೈನ್ ನಿಂದ ತಪ್ಪಿಸಿಕೊಳ್ಳುವ ವಿಚಾರ ಸರಕಾರದ ಗಮನಕ್ಕೆ ಬಂದಿದ್ದು, ಅಂಥವರ ಪತ್ತೆ ಹಚ್ಚುವ ಕೆಲಸಕ್ಕೆ ಸರಕಾರ ಮುಂದಾಗುವುದಿಲ್ಲ ಬದಲಾಗಿ ಸ್ವಯಂಪ್ರೇರಿತವಾಗಿ ಕ್ವಾರೆಂಟೈನ್ ಗೆ ಒಳಗಾಗಬೇಕೆಂದು ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ಧಿಗಾರರ ಜೊತೆ ಮಾತನಾಡಿದರು. ಕ್ವಾರೆಂಟೈನ್ ನಿಂದ ತಪ್ಪಿಸಿಕೊಳ್ಳಲು ಕೆಲವರು ಇಂಥ ಪ್ರಯತ್ನಗಳನ್ನು ನಡೆಸುತ್ತಿದ್ದು, ಅವರನ್ನು ಹುಡುಕುವ ಕೆಲಸಕ್ಕೆ ಸರಕಾರ ಮುಂದಾಗುವುದಿಲ್ಲ.

READ ALSO

ಹೊರ ರಾಜ್ಯಗಳಿಂದ ಬರುವ ಜನ ಸ್ವಯಂಪ್ರೇರಿತವಾಗಿ ಕ್ವಾರೆಂಟೈನ್ ಗೆ ಒಳಗಾಗಬೇಕೆಂದು ಮನವಿ ಮಾಡಿದ ಅವರು ಕೊರೊನಾ ಮಹಾಮಾರಿ ತಡೆಯುವಲ್ಲಿ ಸರಕಾರದ ಜವಾಬ್ದಾರಿಯ ಜೊತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಇದೆ ಎಂದ ಅವರು ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಭಕ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಧಾರ್ಮಿಕ ಸಂಸ್ಥೆಗಳು ಸೂಚಿಸಿದ ನಿಯಮಗಳನ್ನು ಭಕ್ತರು ಪಾಲಿಸಬೇಕಿದ್ದು, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಗೃಹ ಸಚಿವರ ಜೊತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.