ಹಲಸಿನ ಹಣ್ಣಿಗೆ ವಿಷ ಹಾಕಿ ಕಾಮಧೇನುಗಳ ಹತ್ಯೆಗೈದ ಧೂರ್ತರು!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ಕಾಮಧೇನುಗಳ ಸಾವಿಗೆ ಕಾರಣವಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ದೇವರ ನಾಡು ಕೇರಳದಲ್ಲಿ ಅನಾನಸ್ ಒಳಗೆ ಸ್ಪೋಟಕವಿರಿಸಿ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತ ಮಾಸುವ ಮುನ್ನವೇ
ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಹಲಸಿನ ಹಣ್ಣಿಗೆ ವಿಷ ಬೆರೆಸಿ ಮೂರು ದನಗಳನ್ನು ಹತ್ಯೆ ಮಾಡಲಾಗಿದ್ದು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

READ ALSO

ಕಿಟ್ಟೆಗೌಡ ಹಾಗೂ ಮಧು ಎಂಬರಿಗೆ ಸೇರಿದ ಮೂರು ಹಸುಗಳು ಹಲಸಿನ ಹಣ್ಣು ತಿಂದು ಸಾವನ್ನಪ್ಪಿದೆ.

ತೋಟಕ್ಕೆ ದನಗಳು ನುಗ್ಗುತ್ತಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಲಸಿನ ಹಣ್ಣಿಗೆ ವಿಷ ಬೆರೆಸಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು ಈ ಘಟನೆಗೆ ಸಂಬಂಧಿಸಿದಂತೆ‌ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.