ಆಧಾರ್​-ಪ್ಯಾನ್​ ಲಿಂಕ್​ಗೆ ಡೆಡ್​ಲೈನ್ ಬಂತು​: ತಪ್ಪಿದ್ರೆ ಕಾರ್ಡ್​ ನಿಷ್ಕ್ರಿಯ… 58 ಸೆಕೆಂಡ್​ನಲ್ಲಿ ಹೀಗೆ ಲಿಂಕ್​ ಮಾಡಿ

ನವದೆಹಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಆದಾಯ ತೆರಿಗೆ ಇಲಾಖೆಯು 2020ರ ಜೂನ್​ 30ಕ್ಕೆ ನಿಗದಿಪಡಿಸಿದೆ.

ಜನರ ಸುರಕ್ಷತೆಯನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇರಿಸಿಕೊಂಡು ಪಾನ್​- ಆಧಾರ್ ಜೋಡಣೆಗೆ ಕೋರಿಕೊಂಡು ಬರುತ್ತಿದೆ. ಲಾಕ್​ಡೌನ್​ ಹಾಗೂ ಇತರೆ ಕಾರಣಗಳಿಂದ ಇದುವರೆಗೂ 10 ಅಂತಿಮ ಗಡುವು ಮುಂದೂಡಲಾಗಿದೆ. ಬಹುತೇಕ ಕಾರ್ಡ್​ದಾರರು ಜೋಡಣೆಗೆ ಹಿಂದೇಟು ಹಾಕುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಇಲಾಖೆ, ಜೋಡಣೆಯನ್ನು ಕಡೆಗಣಿಸಿದವರಿಗೆ 10,000 ರೂ.ವರೆಗೂ ದಂಡ ಹಾಕುವುದಾಗಿ ಈ ಹಿಂದೆ ಆದಾಯ ತೆರಿಗೆ ಇಲಾಖೆ ಎಚ್ಚರಿಸಿತ್ತು.

READ ALSO

ನಿಗದಿತ ಅವಧಿಯ ಬಳಿಕ ಜೋಡಣೆ ಆಗದಿದ್ದರೆ ಮೊದಲು ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಇದೇ ಕಾರ್ಡ್​ ಅನ್ನು ವಹಿವಾಟಿಗೆ ಬಳಿಸಿಕೊಂಡರೆ ಬಳಕೆದಾರರು 10,000 ರೂ.ವರೆಗೂ ದಂಡ ಕಟ್ಟಬೇಕಾಗುತ್ತದೆ ಎಂದು ಐಟಿ ಇಲಾಖೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್​ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್‌ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌ ಕಾರ್ಡ್‌) ಜೋಡಣೆಯ ವಿಧಾನ ಇಲ್ಲಿದೆ.

ಲಿಂಕ್‌ ಆಗಿದೆಯೇ ಎಂಬುದು ತಿಳಿಯುವುದು ಹೇಗೆ? ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ https://www.incometaxindiaefiling.gov.in ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್‌ ಮಾಡಿ. ಆ ಪುಟದಲ್ಲಿ ‘ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ’ ಎಂಬ ಅರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಕ್ಲಿಕ್‌ ಮಾಡಿ. ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಕ್ಲಿಕ್‌ ಮಾಡಿ. ಆಗ ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶ ಕಾಣಿಸಲಿದೆ.

ಆಧಾರ್- ಪ್ಯಾನ್​ ಲಿಂಕ್ ಮಾಡುವುದು ಹೇಗೆ?
https://www.incometaxindiaefiling.gov.ing ಗೆ ಭೇಟಿ ನೀಡಿ.