ಮುಂಡಾಜೆಯಲ್ಲಿ ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ವತಿಯಿಂದ ಮಾಹಿತಿ ಕಾರ್ಯಗಾರ

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಇದರ ವತಿಯಿಂದ ಕಟ್ಟಡ ಕಾರ್ಮಿಕ ಸೌಲಭ್ಯಗಳ ಮಾಹಿತಿಯನ್ನು ನೀಡುವ ಕಾರ್ಯಕ್ರಮ ಮುಂಡಾಜೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು. ಹಾಗೂ ನೂತನ BMS ಗ್ರಾಮ ಸಮಿತಿಯನ್ನು ‌ ರಚಿಸಲಾಯಿತು ಅದ್ಯಕ್ಷರಾಗಿ ಸುರೇಶ್ ಹೆಗ್ಡೆ ,ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಮತ್ತು ಹೊನ್ನಪ್ಪ ಪೂಜಾರಿ ಅವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.

ನಂತರ BMS ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ ಬಿ.ಕೆ ಅವರು ಕಾರ್ಮಿಕ ಸೌಲಭ್ಯಗಳ ಹಾಗೂ ಭಾರತೀಯ ಮಜ್ದೂರ್ ಸಂಘದ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

READ ALSO

ಈ ಸಂದರ್ಭದಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಹೊಳ್ಳ‌,ಮುಂಡಾಜೆ ಗ್ರಾಮ ಪಂಚಾಯತ್ ಚೆನ್ನಕೇಶವ ಅರಸಮಜಲು ಮತ್ತು ಬಿ.ಎಮ್ ಎಸ್ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ಉಪಸ್ಥಿತರಿದ್ದರು