ಬೆಳ್ತಂಗಡಿ: ಶ್ರಮಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ನಾಡದೋಣಿ ಸೇವೆಗೆ ಚಾಲನೆ ನೀಡಲಾಯಿತು.
ಕಳೆದ ವರ್ಷದ ಮಳೆಗೆ ಮುಗೇರಡ್ಕವನ್ನು ರಾಷ್ಟ್ರೀಯ
ಹೆದ್ದಾರಿಯ ಬಜತ್ತೂರನ್ನು ಸಂಪರ್ಕಿಸುವ ತೂಗು ಸೇತುವೆ ಕೊಚ್ಚಿ ಹೋಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಜಾಗದಲ್ಲಿ ತೂಗು ಸೇತುವೆ ಇಲ್ಲದ ಕಾರಣಕ್ಕೆ ಈ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಹತ್ತಿರದ ಪಟ್ಟಣವಾದ ಉಪ್ಪಿನಂಗಡಿಗೆ ಸಂಪರ್ಕ ಮಾಡಲು ಹತ್ತಾರು ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾಗುತ್ತದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು “ಶ್ರಮಿಕನೆರವು” ಕಾರ್ಯಕ್ರಮದ ಅಡಿಯಲ್ಲಿ ಇಂದು ನಾಡದೋಣಿ ಸೇವೆಯನ್ನು ಆರಂಭಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ರವರ ಈ ಸೇವೆಗೆ ಬಜತ್ತೂರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಡ ದೋಣಿಗೆ ಪೂಜೆ ಮಾಡಿ ಜನರ ಸೇವೆಗಾಗಿ ನೀಡಲಾಯಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ಹಾಗೂ ಬಂದಾರು, ಬಜತ್ತೂರು, ಮುಗೇರಡ್ಕ ಗ್ರಾಮಸ್ಥರು ಉಪಸ್ಥಿತರಿದ್ದರು.