ಗುರಿಪಳ್ಳ-ಪಡ್ಪು ರಸ್ತೆ ಕಾಮಗಾರಿಗೆ 75ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ನಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗುರಿಪಳ್ಳ-ಪಡ್ಪು ರಸ್ತೆಗೆ 75ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಾ ಹಳ್ಳಿಗಳ ಒಳ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡುವ ಗುರಿ ಹೊಂದಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರದ ಅಗತ್ಯವಿದ್ದು ಪ್ರತಿ ಗ್ರಾಮದಲ್ಲಿ ಇನ್ನಷ್ಟು ಹೆಚ್ಚಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು, ಕನ್ಯಾಡಿ ಬಳಿ ಸೇತುವೆಗೆ ಬೇಡಿಕೆ ಬಂದಿದ್ದು ಶೀಘ್ರದಲ್ಲೇ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದರು

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತಗೌಡ, ತಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ.ಎಂ.ಕಲ್ಮಂಜ, ತಾಲೂಕು ಬಿಜೆಪಿ ರೈತಮೋರ್ಚದ ಅಧ್ಯಕ್ಷ ಜಯಂತಗೌಡ, ನಾವೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶಗೌಡ, ಬಂಗಾಡಿ.ಸಿ.ಎ ಬ್ಯಾಂಕಿನ ಅಧ್ಯಕ್ಷ ಹರೀಶ್ ‌ಸಾಲ್ಯಾನ್, ರಮಾನಂದ ಶರ್ಮ, ರಾಧಾಕೃಷ್ಣಭಟ್, ರಾಧಮಾಧವ, ಸುಂದರಗೌಡ, ಶಂಕರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

READ ALSO