TRENDING
Next
Prev

KSRTC ನಾಲ್ಕು ನಿಗಮದ ಸಿಬ್ಬಂದಿಗಳ ಒಂದು ದಿನದ ವೇತನ 9.85ಕೋಟಿ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಹಸ್ತಾಂತರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಎಲ್ಲಾ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನದ ಮೊತ್ತ ರೂ.9,85,09,228/-( 9 ಕೋಟಿ 85 ಲಕ್ಷ 9228) ರೂಗಳ ಚೆಕ್ ಅನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ, ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ, ಶ್ರೀ.ನಂದೀಶ್ ರೆಡ್ಡಿ, ಅಧ್ಯಕ್ಷರು, ಬಿಎಂಟಿಸಿ, ಶ್ರೀ.ಗೌರವ ಗುಪ್ತ, ಪ್ರಧಾನ‌ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಶ್ರೀ.ಶಿವಯೋಗಿ ಸಿ.ಕಳಸದ, ವ್ಯವಸ್ಥಾಪಕ ನಿರ್ದೇಶಕರು
ಕೆ ಎಸ್‌ ಆರ್ ಟಿ ಸಿ, ಡಾ.ರಾಮ್ ನಿವಾಸ್ ಸಪೆಟ್, ನಿರ್ದೇಶಕರು ( ಭ&ಜಾ) , ಶ್ರೀಮತಿ ಕವಿತಾ ಎಸ್ ಮನ್ನಿಕೇರಿ, ನಿರ್ದೇಶಕರು(ಸಿಬ್ಬಂದಿ &ಪರಿಸರ) ಕೆ ಎಸ್‌ ಆರ್ ಟಿ ಸಿ ರವರುಗಳು ಮತ್ತು ಶ್ರೀಮತಿ ಹೆಚ್.ಕೆ.ರಮಾಮಣಿ ಮುಖ್ಯ ಲೆಕ್ಕಾಧಿಕಾರಿ /ಆ.ಸ,
ಕೆ ಎಸ್ ಆರ್ ಟಿ ಸಿ, ಇವರುಗಳು ಉಪಸ್ಥಿತರಿದ್ದರು.

READ ALSO