TRENDING
Next
Prev

ಕರಾವಳಿ ಹಾಗೂ ಕರುನಾಡು ಕನ್ನಡಿಗರ ಪರ ಧ್ವನಿಯಾದ ಶಾಸಕ ಹರೀಶ್ ಪೂಂಜ

ಬೆಂಗಳೂರು: ಕೊರೋನಾ ಮಹಾಮಾರಿಯಿಂದಾಗಿ ಹೊರರಾಜ್ಯದಿಂದ ತವರೂರಿಗೆ ಬರಲಾಗದೆ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಸಿಲುಕಿಹಾಕಿಕೊಂಡ ಕರಾವಳಿಗರು ಮತ್ತು ಇತರ ಜಿಲ್ಲೆಗಳ ಕನ್ನಡಿಗರನ್ನು ತವರಿಗೆ ಕರೆತರಲು ಸಹಕರಿಸುವಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಲ್ಲಿ ಮನವಿ ಮಾಡಿದ್ದಾರೆ.

ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರ ಜಿಲ್ಲೆಗಳ ಗರ್ಭಿಣಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವಾರು ಮಂದಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

READ ALSO

ಈ ಕುರಿತಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ, ಅಲ್ಲಿರುವ ಜನರ ಸಮಸ್ಯೆಗಳ ಕುರಿತಾಗಿ ಮನವರಿಕೆ ಮಾಡಿಕೊಡಲಾಯಿತು. ಅವರ ಕ್ಷೇಮ ಕಾಪಾಡಲು ಸಿಲುಕಿಹಾಕಿಕೊಂಡಿರುವ ನನ್ನ ಬಂಧುಗಳನ್ನು ಕರ್ನಾಟಕಕ್ಕೆ ಬರಲು ಅನುಮತಿ ನೀಡಬೇಕೆಂದು ವಿನಂತಿ ಮಾಡಿದರು.