
ಬೆಳ್ತಂಗಡಿ:- ಕೊರೊನ ವೈರಸಿನಿಂದ ಸುರಕ್ಷತೆಗಾಗಿ ಕೈಗಳನ್ನು ಸ್ಯಾನಿಟೈಸರಿನಿಂದ ಸ್ವಚ್ಛಗೊಳಿಸಲು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸೇವಾಪಥ ಕಾರ್ಯಕ್ರಮದಡಿ ಬೆಳ್ತಂಗಡಿಯ ಸಿಂಡಿಕೇಟ್, ಕೆನರಾ,ವಿಜಯ ಬ್ಯಾಂಕ್ ಶಾಖೆಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ಧಾ, ಸಿಂಡಿಕೇಟ್ ಬ್ಯಾಂಕ್ ಶಾಖೆಯ ಪ್ರಭಂದಕ ನಾರಾಯಣ ನಾಯ್ಕ್, ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಜಯರಾಮ್ ಭಂಡಾರಿ, ಕಾರ್ಯದರ್ಶಿ ಸುರೇಶ ಶೆಟ್ಟಿ, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
