ಮಂಗಳೂರಿನ ಡಿವೈಎಸ್ಪಿ ಸೇರಿದಂತೆ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ತನಿಖಾ ಶ್ರೇಷ್ಠತೆಯ ಪದಕ

ನವದೆಹಲಿ : ಕೇಂದ್ರ ಸರ್ಕಾರದಿಂದ ಕೊಡ ಮಾಡುವಂತ 2021ನೇ ಸಾಲಿನ ತನಿಖಾ ಶ್ರೇಷ್ಠತೆಗಾಗಿ ನೀಡುವಂತ ಕೇಂದ್ರ ಗೃಹ ಸಚಿವರ ಪದಕವನ್ನು ಪ್ರಕಟಿಸಲಾಗಿದೆ. ಈ ಪದಕವನ್ನು ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಪಡೆದಿದ್ದಾರೆ.

ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ಉತ್ತಮ ತನಿಖಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರಕಟಿಸಿದ್ದು, 2021ನೇ ಸಾಲಿನಲ್ಲಿ 152 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಪಡೆದಿದ್ದಾರೆ.

READ ALSO

ಪದಕ ವಿಶೇತ ಪೊಲೀಸ್ ಅಧಿಕಾರಿಗಳ ವಿವರ

🔹ಪರಮೇಶ್ ಅನಂತ್ ಹೆಗ್ಡೆ – ಡಿವೈಎಸ್ಪಿ, ಮಂಗಳೂರು ವಿಭಾಗ
🔸ಹೆಚ್.ಎನ್.ಧರ್ಮೇಂದ್ರ – ಎಸಿಪಿ, ಸಿಸಿಬಿ, ಬೆಂಗಳೂರು
🔹ಬಾಲಕೃಷ್ಣ.ಸಿ – ಡಿವೈಎಸ್ಪಿ, ಎಸ್.ಟಿ.ಎಫ್, ಬಿಡಿಎ, ಬೆಂಗಳೂರು
🔸ಮನೋಜ್ ಎನ್ ಹೊವಳೆ – ಪೊಲೀಸ್ ಇನ್ಸ್ ಪೆಕ್ಟರ್, ಎಸ್‌ಐಟಿ, ಕೆಎಲ್‌ಎ ಬೆಂಗಳೂರು
🔹ದೇವರಾಜ್ ಟಿ ವಿ – ಸರ್ಕಲ್ ಇನ್ಸ್ ಪೆಕ್ಟರ್, ಹೊನ್ನಾಳ್ಳಿ ಸರ್ಕಲ್, ದಾವಣಗೆರೆ ಜಿಲ್ಲೆ
🔸ಶಿವಪ್ಪ ಸಟ್ಟೆಪ್ಪ ಕಮಟಗಿ – ಪೊಲೀಸ್ ಇನ್ಸ್ ಪೆಕ್ಟರ್, ಓಲ್ಡ್ ಹುಬ್ಬಳ್ಳಿ ಪೊಲೀಸ್ ಸ್ಟೇಷನ್, ಹುಬ್ಬಳ್ಳಿ


ಈ ಪ್ರಶಸ್ತಿಯನ್ನು ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ಉತ್ತೇಜಿಸೋದಕ್ಕಾಗಿ ನೀಡಲಾಗುತ್ತಿದೆ.

2018ರಿಂದ ನೀಡಲಾಗುತ್ತಿರುವಂತ ಈ ಪ್ರಶಸ್ತಿಯನ್ನು, ಶ್ರೇಷ್ಠ ವೃತ್ತಿಪರತೆಯನ್ನು ಹೊಂದಿರುವ ಅಧಿಕಾರಿಗಳನ್ನು ಗುರ್ತಿಸೋ ನಿಟ್ಟಿನಲ್ಲಿ ನೀಡಲಾಗುತ್ತಿದೆ.