ಬಳ್ಳಾರಿ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಎರಡು ಇನ್ನೊವಾ ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ನೀರಾವರಿ ಆಯೋಗದಲ್ಲಿ ನಿರ್ದೇಶಕರಾಗಿರುವ ಬೆಂಗಳೂರಿನ ರಾಮಸ್ವಾಮಿ (50), ಜಿತೇಂದ್ರ (50) ಹಾಗೂ ತಿಪಟೂರಿನ ಕಾವ್ಯ (30), ಶರಣಬಸವ (10) ಮೃತರು. ಸರ್ಕಾರಿ ಇನ್ನೊವಾ ಕಾರಿನ ಚಾಲಕ ಅನ್ವರ್, ಮತ್ತೊಂದು ಕಾರಿನ ಚಾಲಕ ಗಿರೀಶ್, ಶಿವಲೀಲಾ, ಸಿದ್ದಲಿಂಗೇಶ್, ಸುವರ್ಣ, ಮಂಜುಶ್ರೀ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆ ಗೆ ಕೊಂಡೊಯ್ಯಲಾಗಿದೆ.