
ಮಂಗಳೂರು: ಚಲಿಸುತ್ತಿದ್ದ ಸ್ಕೂಟರೊಂದು ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಪಡೀಲ್ ನ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ಇಂದು ನಡೆದಿದೆ.
ಅಪಘಾತದಲ್ಲಿ ಮೃತ ವ್ಯಕ್ತಿಯನ್ನು ಅಜಿತ್ ಎಂದು ಗುರುತಿಸಲಾಗಿದೆ. ಇಂದು ರಾತ್ರಿ ಸುಮಾರು 7:15ರ ವೇಳೆಗೆ ಬಜಾಲ್ ಜನ ನಿಬಿಡವಾದ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಸವಾರನ ನಿಯಂತ್ರಣ ಕಳೆದು ಸ್ಕಿಡ್ ಆಗಿ ಬಿದ್ದಿದೆ, ಸ್ಕೂಟರ್ ಬಿದ್ದ ಕೆಲ ಭಾಗದಲ್ಲೇ ಬಾವಿ ಇದ್ದ ಪರಿಣಾಮ ಸವಾರ ಬಾವಿಯೊಳಗೆ ಬಿದ್ದಿದ್ದಾನೆ..
ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಬಂದಿಗಳು ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ವ್ಯಕ್ತಿ ಮೃತಪಟ್ಟಿದ್ದ ಎನ್ನಲಾಗಿದೆ.