TRENDING
Next
Prev

ವೈವಾಹಿಕ ಜೀವನಕ್ಕೆ ಕಾಲಿರಿಸಿದ ಆಲಿಯಾ‌ಭಟ್, ರಣಬೀರ್ ಕಪೂರ್

ಮುಂಬೈ: ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ನವ ದಂಪತಿಗೆ ಬಾಲಿವುಡ್‌ ನಟ -ನಟಿಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ರಣಬೀರ್ ಮತ್ತು ಆಲಿಯಾ ಫೋಟೊ ಹಂಚಿಕೊಂಡಿರುವ ಪ್ರಿಯಾಂಕಾ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು ಸದಾ ಪ್ರೀತಿ, ಸಂತೋಷ ನಿಮ್ಮದಾಗಲಿ’ ಎಂದು ಬರೆದುಕೊಂಡಿದ್ದಾರೆ.

READ ALSO

ಬಾಂದ್ರಾದಲ್ಲಿರುವ ರಣಬೀರ್‌ ಅವರ ‘ವಾಸ್ತು’ ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಿದೆ.

ಸಂಭ್ರಮದಲ್ಲಿ ಫೋಟೊಗಳನ್ನು ಆಲಿಯಾ ಮತ್ತು ರಣಬೀರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು. ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

2010ರಲ್ಲಿ ‘ಅಂಜಾನ ಅಂಜಾನಿ’ ಹಾಗೂ 2012 ರಲ್ಲಿ ‘ಬರ್ಫಿ’ ಸಿನಿಮಾದಲ್ಲಿ ರಣಬೀರ್‌ಗೆ ನಾಯಕಿಯಾಗಿ ಪ್ರಿಯಾಂಕಾ ನಟಿಸಿದ್ದರು.