ಎಲಾನ್ ಮಸ್ಕ್ ಸುಪರ್ದಿಗೆ ಟ್ಟಿಟ್ಟರ್! ಬರೋಬ್ಬರಿ 3.37ಲಕ್ಷಕೋಟಿಗೆ ಟ್ವಿಟ್ಟರ್ ಖರೀದಿಸಿದ ಟೆಸ್ಲಾ, ಸ್ಪೇಸ್ ಎಕ್ಸ್ ಮಾಲ್ಹಕ!

ನ್ಯೂಯಾರ್ಕ್ : ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವೀಟರ್ ಘೋಷಣೆ ಮಾಡಿದೆ.

9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರ ಎನಿಸಿಕೊಂಡಿದ್ದರು ಹಾಗೂ ಟ್ವೀಟರ್ ಗಳನ್ನು ಖರೀದಿಸಲು ಏಪ್ರಿಲ್ 14 ರಂದು 3 ಲಕ್ಷ ಕೋಟಿ ರೂ. ಮೊತ್ತದ ಆಫರ್ ನೀಡಿದ್ದರು. ಅಲ್ಲದೆ ತಮ್ಮ ಶೇ. 9 ಪಾಲನ್ನು ಬಿಟ್ಟು ಉಳಿದ 91 ರಷ್ಟು ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಹೇಳಿದ್ದರು.

READ ALSO

ಟ್ವೀಟರ್ ಉನ್ನತ ಅಧಿಕಾರಿಗಳು ಹಾಗೂ ಮಸ್ಕ್ ನಡುವೆ ಸೋಮವಾರ ಇಡೀ ದಿನ ನಿರಂತರ ಮಾತುಕತೆ ನಡೆದಿದ್ದು, ಅಂತಿಮವಾಗಿ ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಮಸ್ಕ್ ಹಾಗೂ ಟ್ವೀಟರ್ ನಡುವೆ ಒಪ್ಪಂದ ನಡೆದಿದೆ ಎಂದು ಟ್ವಿಟರ್ ತಿಳಿಸಿದೆ.