TRENDING
Next
Prev

ಸ್ವ-ಉದ್ಯೋಗ ಪರಿಕಲ್ಪನೆಯಡಿಯಲ್ಲಿ ಆಟೋ ವಿತರಣೆಗೆ ಚಾಲನೆ ಗ್ರಾಮಾಭಿವೃದ್ಧಿಯೋಜನೆಯ ಫಲಾನುಭವಿ ಗಳಿಗೆ ಧರ್ಮಸ್ಥಳದ ಡಾ.ಹೆಗ್ಗಡೆ ಯವರಿಂದ ವಿತರಣೆ

ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲೆಯ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಆಟೋ ವಿತರಣಾ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ ಶುಭಹಾರೈಸಿದರು.

ತುಮಕೂರು ಜಿಲ್ಲೆಯಲ್ಲಿ ಯೋಜನೆಯ 125 ಫಲಾನುಭವಿಗಳಿಗೆ ಆಟೋ ವಿತರಣಾ ಕಾರ್ಯಕ್ರಮಕ್ಕೆ ತುಮಕೂರು ಕುಂಚಿಟಿಗ ಸಮುದಾಯಭವನದಲ್ಲಿ ಚಾಲನೆ ನೀಡಲಾಯಿತು.

READ ALSO

ತುಮಕೂರು ತಾಲೂಕಿನ 15 ಫಲಾನುಭವಿಗಳಿಗೆ ಡಾ.ಹೆಗ್ಗಡೆಯವರಿಂದ ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಅಧ್ಯಕ್ಷೆ ಫರಿದಾ ಬೇಗಂ,
ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಪ್ರೆಸ್ ರಾಜಣ್ಣ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮೂಲ್ಯ, ಜಿಲ್ಲಾ ನಿರ್ದೇಶಕರಾದ ದಯಾಶೀಲ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಹಾಗೂ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.