TRENDING
Next
Prev

ಲಾಕ್ ಡೌನ್ ನಲ್ಲೊಂದು ಯುವಕರ ಮಹಾತ್ಕಾರ್ಯ, ಸೂರಿಲ್ಲದ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಚಾರ್ಮಾಡಿಯ ಕಾರ್ಯಕರ್ತರ ತಂಡ

ಬೆಳ್ತಂಗಡಿ: ಇಡೀ ದೇಶವೇ ಕೊರೋನಾ ಮಹಾಮಾರಿಗೆ ಸೆಡ್ದು ಹೊಡೆದು ತನ್ನ ಜನತೆಯ ಸುರಕ್ಷತೆಗೆ “lockdown” ಅಸ್ತಿತ್ವಕ್ಕೆ ತಂದ ಸಮಯದಲ್ಲಿ ಇಲ್ಲೊಂದು ಯುವತಂಡ ಸೂರಿಲ್ಲದೆ ಇರುವ ಬಡಕುಟುಂಬಕ್ಕೆ ಸೂರು ಕಲ್ಪಿಸುವ ಮಹತ್ಕಾರ್ಯ ಮಾಡಿ ಮಾದರಿಯಾಗಿದ್ದಾರೆ.

ಚಾರ್ಮಾಡಿ ವಿಶ್ವಹಿಂದೂ ಪರಿಷತ್ ವತಿಯಿಂದ ನಿರ್ಮಿಸಿದ ನೂತನ ಗೃಹ ಶ್ರೀರಾಮ ನಿವಾಸವನ್ನು ತಾಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್ ದೀಪ ಬೆಳಗಿಸಿ ಗೃಹ ಪ್ರವೇಶವನ್ನು ನೆರವೇರಿಸಿದರು.

READ ALSO

ಚಾರ್ಮಾಡಿ ವಿಶ್ವಹಿಂದೂ ಪರಿಷತ್ ವತಿಯಿಂದ ದಾನಿಗಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಯುವಕರು ಒಟ್ಟು ಸೇರಿ ರೂ.6 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಭಾರಿ ಪ್ರಸಂಶೆಗೆ ಪಾತ್ರರಾಗಿದ್ದಾರೆ.

ಯುವ ಸಮೂಹವು ಶ್ರಮಸೇವೆಯ ಮೂಲಕ ಅತೀ ಕಡಿಮೆ ಅವಧಿಯಲ್ಲಿ (65 ದಿನಗಳಲ್ಲಿ) ಮನೆ ನಿರ್ಮಾಣದ ತನ್ನ ಸಂಕಲ್ಪವನ್ನು ಪೂರ್ಣ ಗೊಳಿಸಿ “ಸೇವೆಯೆಮಗೆ ರಾಷ್ಟ್ರ ಕಾರ್ಯ ಋಣವ ಕಳೆ‍ಯೆ ಕಾರಣ ! ಮನುಜ ಜನ್ಮ ಧನ್ಯತೆಗಿದು ಏಕಮೇವ ಸಾಧನ” ಎಂಬ ಸಂಘ ಗೀತೆಯ ಪದ ಪುಂಜಗಳಿಗೆ ಮಾದರಿಯಾಗಿದೆ.

ಪ್ರಸಾದ್ ದಂಪತಿಗಳಿಗೆ ನಿರ್ಮಿಸಿಕೊಟ್ಟ ಮನೆ ಕೇವಲ 3 ತಿಂಗಳಲ್ಲಿ ಆಗಿದೆ. ವಾಸಕ್ಕೆ ಸೂರಿಲ್ಲದ ಪ್ರಸಾದ್ ದಂಪತಿಗೆ ಸೂರು ನಿರ್ಮಿಸಿದ ಎಲ್ಲರಿಗೂ ಪ್ರಸಾದ್ ಕೃತಜ್ಞತೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಜಿಲ್ಲಾ ಭಜರಂಗದಳ ಸಂಚಾಲಕ ಭಾಸ್ಕರ, ಧರ್ಮಸ್ಥಳ ತಾಲೂಕು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಗೋರಕ್ಷ ಸಂಚಾಲಕ ದಿನೇಶ್ ಚಾರ್ಮಾಡಿ, ಮಾಜಿ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಜೈನ್, ಶ್ರೀಮತಿ ಶಾರದಾ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ, ಮಾಜಿ ಅಧ್ಯಕ್ಷ ಕೋಡಿಹಿತ್ತಿಲು ಕೃಷ್ಣಭಟ್ ಉಜಿರೆ ಬೆಳಕು ವಿನಯಚಂದ್ರ, ಅಡಿಮಾರು ಬಾಲಕೃಷ್ಣ ಗೌಡ, ಅಖಿಲೇಶ್ ಭಟ್ ಚಾರ್ಮಾಡಿ.ರಥಬೀದಿ ಸುಧೀರ್, ಗೃಹನಿರ್ಮಾಣದ ಪ್ರೇರಣ ಶಕ್ತಿಗಳಾದ ಅಧ್ಯಕ್ಷ ಜಗದೀಶ, ಉಪಾಧ್ಯಕ್ಷ ಪವನ್ ರಾವ್, ಕಾರ್ಯದರ್ಶಿ ದಿವಿನೇಶ್, ಖಾಜಾಂಚಿ ಸುಧೀರ್ ಹಾಗೂ ಊರವರು ದಾನಿಗಳು ಉಪಸ್ಥಿತರಿದ್ದರು.