ಮೀಜಾರು ಸಮೀಪ ರಸ್ತೆ ಅಪಘಾತ ಬಿಜೆಪಿ ಜಿಲ್ಲಾಧ್ಯಕ್ಷ ಅಪಾಯದಿಂದ ಪಾರು

ಮಂಗಳೂರು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ ಯವರ ಕಾರು ಅಪಘಾತಗೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಮೀಜಾರು ಸಮೀಪ ಎದುರಿನಿಂದ ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಸುದರ್ಶನ್ ರ ಇನ್ನೋವಾ ಕಾರು ಅಪಘಾತವಾಗುವುದನ್ನು ತಪ್ಪಿಸಿದಾಗ , ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಸಂಪೂರ್ಣ ಜಖಂಗೊಂಡಿದೆ.

READ ALSO

ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.