ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತೆ ಕಾಂಗ್ರೆಸ್ ಮಡಿಲಿಗೆ!

ಬೆಳ್ತಂಗಡಿ: ಬೆಳ್ತಂಗಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಂಗ್ರೆಸ್ ಪಾಲಾಗಿದ್ದು, 9 ಸದಸ್ಯ ಬಲದ ಕಾಂಗ್ರೆಸ್ ಎದುರು 8 ಸದಸ್ಯ ಬಲದ ಬಿಜೆಪಿ ಮುಗ್ಗರಿಸಿದೆ.

ಅಧ್ಯಕ್ಷ ಸ್ಥಾನವು ಕೃಷಿಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಚಿದಾನಂದ ಪೂಜಾರಿ ಬಿನ್ ಡಾಕಯ್ಯ ಪೂಜಾರಿ, ಎಲ್ದಕ್ಕ ಮನೆ ಶಿರ್ಲಾಲು ಅವರ ಪಾಲಾಗಿದ್ದು, ಉಪಾಧ್ಯಕ್ಷ ಸ್ಥಾನ ಕೃಷಿಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪಲ್ಲವಿ ಬಿನ್ ಪ್ರಮೋದ್ ಕುಮಾರ್, ಪ್ರತೀಕ್ಷಾ ನಿಲಯ, ಸುದೆಮುಗೆರು ಅವರ ಪಾಲಾಗಿದೆ.

READ ALSO

ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಕಾರ್ಯ ನಿರ್ವಹಿಸಿದ್ದು, ಎ.ಪಿ.ಎಂ.ಸಿ ಯ ಕಾರ್ಯದರ್ಶಿ ಎಸ್. ರವೀಂದ್ರ ಉಪಸ್ಥಿತರಿದ್ದರು.