BELTHANGADY: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಇಂದು ಸಂಜೆ ಬೆಳ್ತಂಗಡಿ ಪೊಲೀಸು ಠಾಣಾ ಪೊಲೀಸ್ ನಿರೀಕ್ಷಕ ಹಾಗೂ ತನಿಖಾಧಿಕಾರಿಯಾದ ಬಿ. ಜಿ. ಸುಬ್ಬಾಪೂರ ಮಠ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು.
ಇದೀಗ ನೋಟಿಸ್ ನೀಡಿದ ಹಿನ್ನೆಲೆ ಶಾಸಕ ಹರೀಶ್ ಪೂಂಜ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸದ್ಯ ವಿಚಾರಣೆ ನಡೆಯತ್ತಿದೆ ಎನ್ನಲಾಗಿದೆ.
ಇನ್ನು ಇದೀಗ ಪೊಲೀಸ್ ಠಾಣೆಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್, ಗಣೇಶ್ ಕಾರ್ಣಿಕ್, ವೇದವ್ಯಾಸ ಕಾಮತ್, ಸತೀಶ್ ಕುಂಪಲ, ಬ್ರಿಜೇಶ್ ಚೌಟ, ಸಾಥ್ ನೀಡಿದ್ದಾರೆ.