BMS ಬೆಳ್ತಂಗಡಿ ವತಿಯಿಂದ ಮುಂಡಾಜೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘ ತಾಲೂಕು ಸಮಿತಿ ‌ಬೆಳ್ತಂಗಡಿ ಹಾಗೂ ಬಿ.ಎಂಎಸ್ ಗ್ರಾಮ ಸಮಿತಿ ಮುಂಡಾಜೆ ಇದರ ಅಶ್ರಯದಲ್ಲಿ ನೊಂದಣಿಯಾದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಾಗೂ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಶಿಬಿರ ಮುಂಡಾಜೆ ಯುವಕ ಮಂಡಲ ಸಭಾಂಗಣದಲ್ಲಿ ‌ಬಿ.ಎಂ.ಎಸ್ ನ ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಬಿ.ಎಂ.ಎಸ್ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ.ಕೆ ಅವರು ಮಾತನಾಡುತ್ತಾ ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದು ಕಾರ್ಮಿಕರಿಗೆ ಸೌಲಭ್ಯಗಳನ್ನು ಸುಲಭವಾಗಿ ತೆಗೆಸಿಕೊಡಲು ನೆರವಾಗು ನಿಟ್ಟಿನಲ್ಲಿ ಕಾರ್ಮಿಕರಿಗೆ ಸಹಕರಿಸುತ್ತಿದ್ದು ಹಾಗೂ ದೇಶಭಿಮಾನದೊಂದಿಗೆ ರಾಷ್ಟ್ರ ಕಾರ್ಯದಲ್ಲಿ ಕಾರ್ಮಿರನ್ನು‌ ಜೋಡಿಸುತ್ತಿದೆ, ಬಿ.ಎಂ.ಎಸ್ ನ ಸ್ಥಾಪಕರಾದ ದತ್ತೋ ಪಂತ ಥೇಂಗಡಿಜೀ ಅವರ ಕನಸನ್ನು ಸಾಕಾರ ಮಾಡಲು ಕಾರ್ಮಿಕರು ಬಿ ಎಂ ಸ್ ನೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು. ಬಿ.ಎಂ.ಎಸ್ ನ ತಾಲೂಕು ಸಮಿತಿ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಕಾರ್ಮಿಕರಿಗಿರುವ ಸೌಲಭ್ಯಗಳು ಹಾಗೂ ಜೀವನ‌ ಬೀಮಾ ಹಾಗೂ ಸುರಕ್ಷಾ ಇನ್ಸೂರೆನ್ಸ್ ಯೋಜನೆಗಳು‌ ಹಾಗೂ ಪ್ರಧಾನ ‌ಮಂತ್ರಿ ಶ್ರಮ ಯೋಗಿಕ್ ಪಿಂಚಣಿ ಯೋಜನೆಗಳ ಮಾಹಿತಿ ನೀಡಿದರು.

READ ALSO

ಕಾರ್ಯಕ್ರಮ ದಲ್ಲಿ ಸುಮಾರು 60 ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಸ್ಥಳೀಯ ‌ಪ್ರಮುಖರಾದ ವಿಶ್ವನಾಥ ಶೆಟ್ಟಿ ಬಿ.ಜೆ.ಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಚೆನ್ನಕೇಶವ ಅರಸಮಜಲು ಹಾಗೂ ಕಲ್ಮಂಜ ಗ್ರಾಮ ಸಮಿತಿ ಅಧ್ಯಕ್ಷರಾದ ಕುಮಾರ್ ನಾಥ್ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎಂ.ಎಸ್ ಮುಂಡಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕಾರ್ಯಕ್ರಮ ‌ನಿರ್ವಹಿಸಿದರು.