ಭಾರತೀಯ ಮಜ್ದೂರು ಸಂಘವು ಶ್ರಮಿಕರ, ಕಾರ್ಮಿಕರ ಕ್ಷೇಮಕ್ಕಾಗಿ ದುಡಿಯುವ ಸಂಘ: ಡಾ. ಪ್ರಭಾಕರ ಭಟ್ ಕಲ್ಲಡ್ಕ

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ, ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಸ್ಥಳಾಂತರಗೊಂಡಿರುವ ನೂತನ ಕಛೇರಿಯ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಕಾರ್ಯಕ್ರಮವು ಭಾರತೀಯ ಮಜ್ದೂರು ಸಂಘದ ನೂತನ ಕಛೇರಿಯ ವಠಾರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಣಿ ಆಮಂತ್ರಿತ ಸದಸ್ಯರಾದ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ಭಾರತದಲ್ಲಿ ಮೊದಲನೇ ಸ್ಥಾನವನ್ನ ಭಾರತೀಯ ಮಜ್ದೂರು ಸಂಘ ಪಡೆದಿದೆ. ಶ್ರಮಿಕರ, ಕಾರ್ಮಿಕರ ಕ್ಷೇಮಕ್ಕಾಗಿ ದುಡಿಯುವ ಸಂಘ ಅಂದರೆ ಭಾರತೀಯ ಮಜ್ದೂರು ಸಂಘ, ಹಿಂದುತ್ವದಿಂದ ಜಗತ್ತು ಬೆಳೆಯುವುದು, ಜಗತ್ತಿಗೆ ಹಿತವನ್ನು ಮಾಡುವ ದೃಷ್ಠಿಕೋನ ಕಾರ್ಮಿಕರದ್ದು. ಒಬ್ಬ ಕಾರ್ಮಿಕ ಪ್ರಾಮಾಣಿಕವಾಗಿ ದುಡಿಯುತ್ತಾನೆ ಆತನಿಗೆ ಸಹಕಾರ ಸಿಕ್ಕಿದರೆ ಆತ ತನ್ನ ಊರು ಗ್ರಾಮವನ್ನೇ ಎತ್ತಿ ಹಿಡಿಯುತ್ತಾನೆ. ಶ್ರಮಿಕನಿಲ್ಲದ ಬದುಕಿಲ್ಲ, ಹಂಚಿಕೊಂಡು ಬದುಕೋಣ ಅನ್ನುವ ಚಿಂತಣೆ ಅದು ಭಾರತೀಯ ಚಿಂತನೆ ಎಂದು ತಿಳಿಸಿದರು.

READ ALSO


ಇದೇ ವೇಳೆ ಮಾತನಾಡಿದ ಪ್ರತಾಪ್ ಸಿಂಹ ನಾಯಕ್ ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಮಜ್ದೂರು ಸಂಘ ಈ ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ. ಸಮಾಜದ ರಾಷ್ಟ್ರದ ಅಭಿವೃದ್ದಿಗೆ ಸಾಮರಸ್ಯ ಅತೀ ಮುಖ್ಯ. ಎಂದು ಮುಂದೆ ಬಂದ ಸಂಘ ಭಾರತೀಯ ಮಜ್ದೂರು ಸಂಘ. ಎಂದು ಸಂತೋಷ ವ್ಯಕ್ತಪಡಿಸಿದರು.


ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ ತಾಲೂಕಿನ ಬೂತ್ ಮಟ್ಟಕ್ಕೆ ಭಾರತೀಯ ಮಜ್ದೂರ್ ಸಂಘವನ್ನು ತಂದಿದ್ದಾರೆ ಎಂದರೆ ಅದು ಸಂತಸದ ವಿಷಯವಾಗಿದೆ. ಪ್ರಾಮಾಣಿಕ ವಾದ ಪ್ರಯತ್ನವನ್ನು ಶ್ರಮಿಕರಿಗಾಗಿ ಮಾಡುವ ಸಂಘ ಅಂದರೆ ಭಾರತೀಯ ಮಜ್ದೂರು ಸಂಘ ತನ್ನ ವೃತ್ತಿಯಲ್ಲಿ ಸಿಗುವಂತಹ ಹಣವನ್ನು ಶ್ರಮಿಕರಿಗಾಗಿ ನೀಡಿ ಪ್ರಾಮಾಣಿಕವಾಗಿ ದುಡಿಯುವ ಸಂಘ ಅಂದರೆ ಭಾರತೀಯ ಮಜ್ದೂರು ಸಂಘ. ಸ್ವಾರ್ಥ ಇಲ್ಲದೆ ನಿಸ್ವಾರ್ಥದಿಂದ ಕಾರ್ಯ ಮಾಡಿದ ಸಲುವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ನೂತನವಾಗಿ ಭಾರತೀಯ ಮಜ್ದೂರು ಸಂಘ ಕಟ್ಟಡ ಸ್ಥಾಪನೆಯಾಗಲು ಕಾರಣವಾಯಿತು. ಪ್ರಾಮಾಣಿಕ ಪ್ರಯತ್ನ ಬೆಳ್ತಂಗಡಿ ಬಿಎಂಎಸ್ ಸಂಘದಿಂದ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಭಾರತೀಯ ಮಜ್ದೂರು ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷರು ವಿಶ್ವನಾಥ ಶೆಟ್ಟಿ ಮಾತನಾಡಿ
ವಿಶ್ವದಲ್ಲೇ ಮೊದಲ ಸ್ಥಾನವನ್ನ ಪಡೆದಿದೆ ಭಾರತೀಯ ಮಜ್ದೂರು ಸಂಘ. ಇದಕ್ಕೆ ಕಾರಣ ಕಾರ್ಮಿಕ ವರ್ಗಕ್ಕೆ ಸಲ್ಲಬೇಕು.ಭಾರತೀಯ ಮಜ್ದೂರು ಸಂಘದ ಬೆಳವಣಿಗೆ ಬೆಳೆಯುತ್ತಾ ಹೋಗುತ್ತಿರುವುದು ಸಂತಸದ ವಿಚಾರವಾಗಿದೆ. ಎಂದು ಅಭಿಪ್ರಾಯ ಪಟ್ಟರು.


ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಕಾರ್ಯಕಾರಣಿ ಆಮಂತ್ರಿತ ಸದಸ್ಯರು ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರು ಶ್ರೀ ಉದಯ ಬಿ.ಕೆ, ಶಾಸಕರು ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಶ್ರೀ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷರು ರಜನಿ ಕುಡ್ವ, ಉಪಾಧ್ಯಕ್ಷರಾದ ಜಯಾನಂದ ಗೌಡ,ಭಾರತೀಯ ಮಜ್ದೂರು ಸಂಘ ರಾಜ್ಯ ಉಪಾಧ್ಯಕ್ಷರು ಶ್ರೀ ಭಗವಾನ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.