TRENDING
Next
Prev

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕಕ್ಕೆ ಕೇಂದ್ರದ ಒಪ್ಪಿಗೆ

ಬೆಂಗಳೂರು: ಕೇಂದ್ರ ಮುಂಗಡ ಪತ್ರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಒಪ್ಪಿಗೆ ನೀಡಲಾಗಿದೆ.

ಈ ಸಂಬಂಧ ಬೆಂಗಳೂರು ನಗರಕ್ಕೆ 14,788 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.

READ ALSO

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಮ್ಮ ಮೆಟ್ರೋ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ನಿರ್ಮಲಾ ಸೀತಾರಾಮನ್ ನಮ್ಮ ಮೆಟ್ರೋ 2ಎ ಮತ್ತು 2ಬಿ ಯೋಜನೆ ವಿಸ್ತರಣೆಗೆ ಮುಂಗಡ ಪತ್ರದಲ್ಲಿ 14,788 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಈ ಅನುದಾನದಲ್ಲಿ ನಗರದಲ್ಲಿ ಒಟ್ಟು 58.19 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆಯ 2ಎ ಮತ್ತು 2ಬಿ ಅಡಿ ಬೆಂಗಳೂರು ನಗರದ ಹೊರ ವಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಸಿದ್ದಪಡಿಸಿತ್ತು. ಈ ಯೋಜನೆಗೆ ಅಧಿಕೃತವಾಗಿ ಕೇಂದ್ರದ ಒಪ್ಪಿಗೆ ಸಿಕ್ಕಿದೆ.

ಈ ಮಾರ್ಗದ ಮೆಟ್ರೋ ಯೋಜನೆಯ ಶೇ 35 ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಉಳಿದ 35 ಶೇ ಸಾಲ ಪಡೆಯುವ ಗುರಿಹೊಂದಲಾಗಿದೆ. ಖಾಸಗಿ ಕಂಪನಿಗಳು ಶೇ 15ರಷ್ಟು ಬಂಡವಾಳ ಹೂಡಿಕೆ ಮಾಡಲಿವೆ.