ಬುಡೋಳಿಯಲ್ಲಿ “ಬೆಳಕು” ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ

ಬಂಟ್ವಾಳ: ಸ್ವಾತಂತ್ರ್ಯ ದಿನದ ಶುಭದಿನದಂದು ಪೆರಾಜೆ ಗ್ರಾಮದ ಬುಡೋಳಿಯಲ್ಲಿ “ಬೆಳಕು” ಸೇವಾ ಟ್ರಸ್ಟ್ ಎಂಬ ಯುವ ಸಂಘಟನೆಯನ್ನು ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ ದ ಮಾಜಿ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಶ್ರೀ ಅಪ್ರಾಯ ಪೈಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಶಂಭುಕುಮಾರ್ ಶರ್ಮ ಇವರು ದೀಪ ಬೆಳಗಿಸಿ ಲೋಗೋ ಬಿಡುಗಡೆಯ ಮೂಲಕ ಉದ್ಘಾಟಿಸಿದರು.

ವಿಶ್ವನಾಥ ಪೂಜಾರಿ ಸಾದಿಕುಕ್ಕು, ಗಂಗಾಧರ ಗೌಡ, ವಸಂತ್, ಜಗದೀಶ್, ಯೋಗೀಶ್, ಮನೋಹರ್, ಪ್ರಶಾಂತ್, ದಿನೇಶ್ ಮಡಲ, ತಿಮ್ಮಪ್ಪ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಮಂಜೊಟ್ಟಿ ನಿರೂಪಿಸಿ, ದೀಪಕ್ ಪೆರಾಜೆ ಪ್ರಸ್ತಾವನೆಗೈದು, ಪ್ರದೀಪ್ ಮಡಲ ಸ್ವಾಗತಿಸಿ ಲೋಹಿತ್ ಮಡಲ ಧನ್ಯವಾದವಿತ್ತರು.

READ ALSO