ಬಸ್ ಕಾರು ನಡುವೆ ಅಫಘಾತ ಮೂವರು ಮಕ್ಕಳು ಸೇರಿದಂತೆ ಐವರ ಸ್ಥಿತಿ ಗಂಭೀರ! ಅತೀ ವೇಗದ ಚಾಲನೆಯೇ ಅಫಘಾತಕ್ಕೆ ಕಾರಣವಾಗಿದೆ.

ನೆಲ್ಯಾಡಿ : ಸರಕಾರಿ ಬಸ್ ಹಾಗೂ ಅಲ್ಟೋ ಕಾರಿನ ನಡುವೆ ಅಫಘಾತ ಸಂಭವಿಸಿದ್ದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

ಕೊಕ್ಕಡದ ಪಟ್ರಮೆ ನಿವಾಸಿಗಳಿದ್ದ ಅಲ್ಟೋ ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

READ ALSO