ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ರೂ ಕಡ್ಡಾಯವಾಗಿ ಮಾಸ್ಕ್​ ಧರಿಸಲೇಬೇಕು -ಹೈಕೋರ್ಟ್​​ ಆದೇಶ

ಬೆಂಗಳೂರು: ಕಾರ್​ನಲ್ಲಿ ಒಬ್ಬರೇ ಹೋಗುತ್ತಿದ್ದರೂ ಮಾಸ್ಕ್​ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಲೇಬೇಕು ಅಂತಾ ದೆಹಲಿ ಹೈಕೋರ್ಟ್​ ಹೇಳಿದೆ. ಮಾಸ್ಕ್​ ಅನ್ನೋದು ಸುರಕ್ಷಾ ಕವಚವಾಗಿದೆ. ಹೀಗಾಗಿ ಮಾಸ್ಕ್​ ಅನ್ನು ಧರಿಸಲೇ ಬೇಕು ಅಂತಾ ಹೈಕೋರ್ಟ್​ ತಿಳಿಸಿದೆ.

ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗಲೂ ಮಾಸ್ಕ್​ ಧರಿಸದೇ ಇರೋದಕ್ಕೆ ದಂಡ ಹಾಕಿದ ಕೇಸ್​ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್​, ದೇಶದಲ್ಲಿ ಇಂದು ಕೊರೊನಾ ಸೋಂಕು ವಿಪರೀತವಾಗಿ ಹಬ್ಬತ್ತಿದೆ. ಹೀಗಾಗಿ ಮಾಸ್ಕ್​ ಅನ್ನೋದು ಸುರಕ್ಷಾ ಕವಚವಾಗಿದೆ. ಮಾಸ್ಕ್​ ಅನ್ನು ಒಬ್ಬರೇ ಹೋಗುತ್ತಿದ್ದರೂ ಧರಿಸಲೇಬೇಕು ಅಂತಾ ಕೋರ್ಟ್​ ಆದೇಶಿಸಿದೆ. ಅಲ್ಲದೇ ವಾಹನ ಸಹ ಸಾರ್ವಜನಿಕ ಪ್ರದೇಶ ಅಂತಾ ಹೈ ಕೋರ್ಟ್ ಹೇಳಿದೆ

READ ALSO