ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ (ರಿ)ಕಾನರ್ಪ ಕಡಿರುದ್ಯಾವರ ಇದರ ವತಿಯಿಂದ 31ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಚಿರಂಜೀವಿ ಯುವಕ ಮಂಡಲ ಮತ್ತು ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಹಾಗೂ ಊರಿನ ಭಕ್ತಾಭಿಮಾನಿಗಳ ಸಹಕಾರಗಳೊಂದಿಗೆ ದಿನಾಂಕ 18/08/2022ರಂದು ಯುವಕ ಮಂಡಲದಲ್ಲಿ ಗಣಹೋಮ, ಶ್ರೀ ಕೃಷ್ಣ ಪೂಜೆ, ಮತ್ತು ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಮಧುಸೂದನ ಭಟ್ ಮತ್ತು ಶ್ರೀ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆದ ವೈದಿಕ ಕಾರ್ಯಕ್ರಮದೊಂದಿಗೆ ಯುವಕ ಮಂಡಲ ಮತ್ತು ಮಹಿಳಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ ಕುಮಾರ್, ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಚಿರಂಜೀವಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ, ಅಧ್ಯಕ್ಷರಾದ ಜನಾರ್ಧನ.ಕೆ, ಕಾರ್ಯದರ್ಶಿ ರವೀಂದ್ರ ಕಾನರ್ಪ, ರಾಮಚಂದ್ರ.ಕೆ, ರಾಜೇಶ.ಎಂ.ಕಾನರ್ಪ, ಹರ್ಷನಾರಾಯಣ ಭಟ್, ಲಕ್ಷ್ಮಣ ಗೌಡ, ದಾಮೋದರ ಗೌಡ, ಬಾಲಕೃಷ್ಣ ಗೌಡ, ನೀಲಯ್ಯ ಗೌಡ.ಎಂ, ಜಯರಾಮ್, ಶ್ರೀ ಕೃಷ್ಣ ಭಟ್, ದಿನೇಶ್ ಪೂಜಾರಿ, ನಿತ್ಯಾನಂದ, ಯಶೋಧರ ಗೌಡ, ಚಂದ್ರಯ್ಯಗೌಡ, ಓಬ್ಬಯ್ಯಗೌಡ, ಆನಂದಗೌಡ, ಜಿನ್ನಪ್ಪ ಗೌಡ, ಅಶೋಕ ಗೌಡ, ಕಮಲಾಕ್ಷ, ಜಯಂತ ಗೌಡ, ಚೆನ್ನಕೇಶವ, ಉಮೇಶ್, ಸುರೇಶ್ ಗೌಡ, ಗುರುರಾಜ್.ಕೆ, ರಾಜೇಂದ್ರ.ಎಂ, ಮೋಹನ ಗೌಡ, ವಸಂತ, ಚಂದ್ರಕಾಂತ, ಸಂಜೀವ ಗೌಡ, ಲೋಕಯ್ಯ ಗೌಡ, ದರ್ಣಪ್ಪ ಕುಕ್ಕಾವು, ಪ್ರವೀಣ್, ಜಗದೀಶ್ ನಾಯ್ಕ, ಸವಿತಾ, ವಿನಯ.ಆರ್ ಗೌಡ, ರತ್ನಾವತಿ, ಹೇಮಾವತಿ, ಸುಮಿತ್ರ, ಜಯಪ್ರಭಾ, ಭವ್ಯ.ಕೆ, ವಸಂತಿ, ಪೂರ್ಣಿಮಾ, ಚಂದ್ರಾವತಿ, ಕುಸುಮಾವತಿ, ಯಶೋಧ, ಕುಮಲ, ದೇವಕಿ, ದಾಜಮ್ಮ, ಚೇತನ, ಪುಷ್ಪಾ, ಕುಸುಮಾವತಿ.ಆರ್, ದೀಪ ಪಟವರ್ಧನ್, ವನಿತಾ, ಮೀನಾಕ್ಷಿ, ಸುಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.