ಬಹುಮತ ಸಾಬೀತು ಪಡಿಸುವಲ್ಲಿ ವಿಫಲ! ಪುದುಚೇರಿ ಕಾಂಗ್ರೇಸ್ ಸರಕಾರ ಪತನ!

ಪುದುಚೇರಿ : ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲಗೊಂಡಿದೆ.

ಪುದುಚೇರಿ ರಾಜಕೀಯ ಬಿಕ್ಕಟ್ಟು

READ ALSO

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ವಜಾಗೊಂಡ ಕೆಲವೇ ಗಂಟೆಗಳಲ್ಲಿಲೋಕೋಪಯೋಗಿ ಇಲಾಖೆ ಸಚಿವ ಎ.ನಮಸ್ಸಿವಾಯಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕ ಇ. ತೀಪೈದನ್ ಕೂಡಾ ರಾಜೀನಾಮೆ. ಮರುದಿನ ಇವರಿಬ್ಬರೂ ಬಿಜೆಪಿ ಸೇರಿದ್ದರು.

 ಆರೋಗ್ಯ ಸಚಿವ ಮಲ್ಲಡಿ ಕೃಷ್ಣ ರಾವ್ ರಾಜೀನಾಮೆ. ರಾವ್ ಅವರ ರಾಜೀನಾಮೆಯಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 11ಕ್ಕೆ ಇಳಿದಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಇನ್ನೊಬ್ಬ ಶಾಸಕ ಎನ್.ಧನವೇಲು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅನರ್ಹಗೊಂಡಿದ್ದರು.

ಶಾಸಕ ಎ. ಜಾನ್ ಕುಮಾರ್ ರಾಜೀನಾಮೆ. ಮರುದಿನವೇ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ಪದಚ್ಯುತಿ. ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ

 ಎನ್ ರಂಗಸ್ವಾಮಿ ನೇತೃತ್ವದ ವಿಪಕ್ಷಗಳು ಆಡಳಿತಾರೂಢ ಪಕ್ಷ ಬಹುಮತ ಸಾಬೀತು ಪಡಿಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಸಲ್ಲಿಕೆ. ಆಡಳಿತಾರೂಢ ಪಕ್ಷವು ಅಲ್ಪಮತಕ್ಕೆ ಕುಸಿದಿದ್ದು ಎರಡೂ ಪಕ್ಷಗಳು ಈಗ 14 ಸದಸ್ಯರನ್ನು ಹೊಂದಿದ್ದಾರೆ.

ಗವರ್ನರ್ ತಮಿಳಿಸೈ ಸೌಂದರರಾಜನ್ ಅವರ ಸೂಚನೆಯಂತೆ ಸಿಎಂ ನಾರಾಯಣಸ್ವಾಮಿ ಇಂದು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದು, ಪುದುಚೆರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿದೆ.