ಕೊರೋನಾ ಹೆಮ್ಮಾರಿಗೆ ಮಂಗಳೂರಿನ ಯುವ ವೈದ್ಯೆ ಬಲಿ!

ಮಂಗಳೂರು: ಕೊರೊನಾ ಮಹಾಮಾರಿಯ ಆರ್ಭಟ ಮಿತಿ ಮೀರುತ್ತಿದ್ದು, ದಿನೇ ದಿನೇ ಕೋವಿಡ್ ಎಂಬ ಹೆಮ್ಮಾರಿ ರಾಜ್ಯದಲ್ಲಿ ನೂರಾರು ಸಂಖ್ಯೆ ಜನರನ್ನು ಬಲಿಪಡೆಯುತ್ತಿದೆ.

ರೋಗಿಗಳ ಪ್ರಾಣ ಕಾಪಾಡುವ ವೈದ್ಯಯೊಬ್ಬರ ಪ್ರಾಣವನ್ನೇ ಈ ಹೆಮ್ಮಾರಿ ಬಲಿ ಪಡೆದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 27ವರ್ಷದ ಯುವ ವೈದ್ಯೆ ಕೋವಿಡ್ ಪಾಸಿಟಿವ್‌ನಲ್ಲಿ ನಿನ್ನೆ ಬೆಳಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ನೂರಾರು ರೋಗಿಗಳ ಜೀವ ಕಾಪಾಡುತ್ತಿದ್ದ ವೈದ್ಯೆಯನ್ನೇ ನಿನ್ನೆ ಮಹಾಮಾರಿ ಬಲಿ ಪಡೆದುಕೊಂಡಿದೆ. .

READ ALSO

ರಾಜ್ಯದಲ್ಲಿ ದಿನೇ ದಿನೇ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ವೈದ್ಯಯೇ ಕೋವಿಡ್ ನಿಂದ ಸಾವನ್ನಪ್ಪಿರೋದು ಜನರಲ್ಲಿ ಆತಂಕ ಮೂಡಿಸಿದೆ. ಹಾಗಂಥ ಕೊರೊನಾ ಬಗ್ಗೆ ಭಯಬೇಡ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಎಚ್ಚರದಿಂದ ಧೈರ್ಯವಾಗಿದ್ದರೆ ಎಲ್ಲವನ್ನೂ ಗೆಲ್ಲಬಹುದು.