ದತ್ತಜಯಂತಿಯ ಮಹತ್ವವೇನು?, ದತ್ತಾತ್ರೇಯನಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯ ಇವುಗಳ ಸೊಗಸಾದ ಸಂಗಮವಿದೆ.

🖊️ಶ್ರೀ. ವಿನೋದ ಕಾಮತ,
ಸನಾತನ ಸಂಸ್ಥೆ, ಕರ್ನಾಟಕ

ಡಿಸೆಂಬರ್ ೨೯ ರಂದು, ಮಾರ್ಗಶಿರ ಶುಕ್ಲ ಪೌರ್ಣಿಮೆಯಂದು ದತ್ತಜಯಂತಿ ಇದೆ. ದತ್ತಜಯಂತಿಯ ದಿನದಂದು ಪೃಥ್ವಿಯ ಮೇಲೆ ಶ್ರೀದತ್ತ ತತ್ತ್ವವು ಇತರ ದಿನಗಳ ತುಲನೆಗಿಂತ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಈ ದಿನದಂದು ದತ್ತನ ನಾಮಜಪಾದಿ ಉಪಾಸನೆಗಳನ್ನು ಮನಃಪೂರ್ವಕವಾಗಿ ಮಾಡಿದರೆ ದತ್ತತತ್ತ್ವದ ಹೆಚ್ಚು ಹೆಚ್ಚು ಲಾಭ ಪಡೆಯಲು ಸಹಾಯವಾಗುತ್ತದೆ. ಆದ್ದರಿಂದ ಈ ದಿನದಂದು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.


ಹಿಂದೊಮ್ಮೆ ಭೂತಲದ ಮೇಲೆ ಸ್ಥೂಲ ಮತ್ತು ಸೂಕ್ಷ್ಮ ರೂಪಗಳಲ್ಲಿ ಆಸುರಿ ಶಕ್ತಿಗಳ ಪ್ರಮಾಣವು ಬಹಳ ಹೆಚ್ಚಾಗಿತ್ತು. ಅವುಗಳನ್ನು ದೈತ್ಯ ಎಂದು ಕರೆಯಲಾಗುತ್ತಿತ್ತು. ದೇವತೆಗಳು ಆ ಆಸುರಿ ಶಕ್ತಿಗಳನ್ನು ನಾಶಗೊಳಿಸುವುದಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಆಗ ಬ್ರಹ್ಮದೇವನ ಆದೇಶಕ್ಕನುಸಾರ ದತ್ತ ದೇವರು ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅವತಾರ ತಾಳಬೇಕಾಗಿ ಬಂದಿತು. ತದನಂತರ ದೈತ್ಯರ ನಾಶವಾಯಿತು. ಆ ದಿನವನ್ನೇ ದತ್ತಜಯಂತಿ ಎಂದು ಆಚರಿಸುತ್ತಾರೆ. ದತ್ತಜಯಂತಿಯನ್ನು ಆಚರಿಸುವ ಕುರಿತು ಶಾಸ್ತ್ರೋಕ್ತವಾದ ವಿಶಿಷ್ಟ ವಿಧಿಯು ಎಲ್ಲಿಯೂ ಕಾಣ ಸಿಗುವುದಿಲ್ಲ. ಸಾಮಾನ್ಯವಾಗಿ ಏಳು ದಿನಗಳ ಕಾಲ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದನ್ನೇ ಗುರುಚರಿತ್ರ ಸಪ್ತಾಹ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾವಾಡಿ ಹಾಗೂ ಕರ್ನಾಟಕದಲ್ಲಿ ಗಾಣಗಾಪುರ  ಈ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿರುತ್ತದೆ. ತಮಿಳು ನಾಡಿನಲ್ಲಿಯೂ ದತ್ತ ಜಯಂತಿಯನ್ನು ಆಚರಿಸುವ ಪದ್ಧತಿಯಿದೆ. ದತ್ತಜಯಂತಿಯಂದು ಕೆಲವೆಡೆ ದತ್ತಯಾಗವನ್ನು ಮಾಡಲಾಗುತ್ತದೆ.


ಪ್ರತಿಯೊಂದು ದೇವೆತೆಗೂ ವಿಶಿಷ್ಟ ಕಾರ್ಯವಿರುತ್ತದೆ. ಹೇಗೆ ಗಣಪತಿಯು ಬುದ್ಧಿಯ ದೇವನೋ, ಸರಸ್ವತಿಯು ವಿದ್ಯೆಯ ದೇವಿಯೋ ಹಾಗೆಯೇ ಶ್ರೀ ದತ್ತಗುರುವು ಪೂರ್ವಜರಿಗೆ ಸದ್ಗತಿಯನ್ನು ಕೋಡುವ ದೇವನಾಗಿದ್ದಾನೆ. ಹಿಂದಿನ ಕಾಲದಲ್ಲಿ ಜನರು ಶ್ರಾದ್ಧಪಕ್ಷಗಳನ್ನು, ಸಾಧನೆಯನ್ನು ಮಾಡುತ್ತಿದ್ದರು ಆದರೆ ಪ್ರಸ್ತುತ ಹೆಚ್ಚಿನ ಜನರು ಶ್ರಾದ್ಧಪಕ್ಷಾದಿಗಳನ್ನಾಗಲಿ, ಸಾಧನೆಯನ್ನಾಗಲಿ  ಮಾಡದಿರುವ ಕಾರಣ ಹೆಚ್ಚಿನ ಜನರಿಗೆ ಪುರ್ವಜರ ಲಿಂಗದೇಹಗಳಿಂದ / ಸೂಕ್ಷ್ಮ ದೇಹಗಳಿಂದ ತೊಂದರೆಗಳಾಗುತ್ತವೆ. ದತ್ತದೇವರು ಪೂರ್ವಜರಿಗೆ ಸದ್ಗತಿಯನ್ನು ಕೊಟ್ಟು ಅವರ ಉದ್ಧಾರ ಮಾಡುತ್ತಾರೆ. ಆದ್ದರಿಂದ ದತ್ತಗುರುಗಳ ಉಪಾಸನೆಯಿಂದ ವ್ಯಕ್ತಿಗೆ ಆಗುತ್ತಿರುವ ಪೂರ್ವಜರ ತೊಂದರೆಯು ಕಡಿಮೆಯಾಗುತ್ತದೆ ಅವರಿಗೆ ಸದ್ಗತಿ ಸಿಗುತ್ತದೆ.


ದತ್ತಾತ್ರೇಯನಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯ ಇವುಗಳ ಸೊಗಸಾದ ಸಂಗಮವಿರುವುದು : ‘ಭಗವಾನ್ ದತ್ತಾತ್ರೇಯರೆಂದರೆ ‘ಬ್ರಹ್ಮ-ವಿಷ್ಣು-ಮಹೇಶ್ವರ’ ಈ ತ್ರಿಮೂರ್ತಿಗಳ ರೂಪ. ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣುವು ವಾತ್ಸಲ್ಯಸ್ವರೂಪ ಮತ್ತು ಶಿವನು ವೈರಾಗ್ಯಸ್ವರೂಪ. ಈ ತ್ರಿಮೂರ್ತಿಗಳು ಒಟ್ಟಿಗಿರುವ ರೂಪವಿರುವ ದತ್ತಾತ್ರೇಯನಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯ ಇವುಗಳ ಉತ್ತಮ ಸಂಗಮವಿದೆ. ಭಗವಾನ್ ದತ್ತಾತ್ರೇಯರಲ್ಲಿ ವೈರಾಗ್ಯವಿರುವುದರಿಂದ ಅವರು ಸಂನ್ಯಾಸಿಯಂತೆ ಜೀವನ ಕಳೆಯುತ್ತಾರೆ. ಅವರ ನಿವಾಸಸ್ಥಾನವೆಂದರೆ ಮೇರುಶಿಖರ. ಸಂಧ್ಯಾ ಹಾಗೂ ಇತರ ದಿನಕ್ರಮಗಳನ್ನು ಅವರು ಬೇರೆ ಬೇರೆ ಕಡೆಗಳಲ್ಲಿ ಮಾಡುತ್ತಾರೆ. ಅವರಲ್ಲಿ ವೈರಾಗ್ಯ ವೃತ್ತಿಯು ಪ್ರಬಲವಾಗಿರುವುದರಿಂದ ಅವರಿಗೆ ಯಾವುದೇ ಸ್ಥಾನದ ಮೋಹಬಂಧನವಿಲ್ಲ. ಹೀಗಾಗಿ ಅವರು ಸ್ವೇಚ್ಚಾವಿಹಾರಿಯಾಗಿದ್ದಾರೆ. ಜೀವನ್ಮುಕ್ತರಾಗಿರುವುದರಿಂದ ಅವರು ಬ್ರಹ್ಮಾಂಡದಲ್ಲಿ ಎಲ್ಲಿ ಬೇಕಾದರೂ ಮುಕ್ತವಾಗಿ ಸಂಚರಿಸುತ್ತಾರೆ. ಅವರಲ್ಲಿ ವೈರಾಗ್ಯಭಾವವು ಪ್ರಬಲವಾಗಿರುವುದರಿಂದ ಅವರು ಮೋಹಮಾಯೆಗಳಿಂದ ಅಲಿಪ್ತರಾಗಿದ್ದಾರೆ; ಆದರೆ ಅವರು ಭಕ್ತರ ಪ್ರೇಮದ ಮಾಯೆಯ ಬಂಧನದಲ್ಲಿದ್ದಾರೆ. ಭಕ್ತರು ಯಾರೇ, ಅವರನ್ನು ಸ್ಮರಣೆ ಮಾಡಿದ ಕೂಡಲೇ ಅವರು ತಕ್ಷಣ ಪ್ರಕಟವಾಗುತ್ತಾರೆ. ಆದ್ದರಿಂದ ಅವರನ್ನು ಸ್ಮರ್ತೃಗಾಮಿ ಎನ್ನಲಾಗಿದೆ.


ಭಗವಾನ್ ದತ್ತಾತ್ರೇಯರು ಸದ್ಗುರುಪದವಿಯಲ್ಲಿ ವಿರಾಜಮಾನರಾಗಿದ್ದಾರೆ . ಆದರೂ ಅವರು  ವೃತ್ತಿಯಿಂದ ಸತತವಾಗಿ ಶಿಷ್ಯಾವಸ್ಥೆಯಲ್ಲಿರುತ್ತಾರೆ. ಶಿಷ್ಯನೆಂದರೆ ಸತತವಾಗಿ ಕಲಿಯುತ್ತಲೇ ಇರುವವನು. ತಮ್ಮ ಶಿಷ್ಯಾವಸ್ಥೆಯಿಂದಾಗಿಯೇ ಅವರು ೨೪ ಗುಣಗುರುಗಳನ್ನು ಸ್ವೀಕರಿಸಿದರು; ಎಂದರೆ ಚಲ-ಅಚಲ ವಸ್ತುಗಳ ಗುಣಧರ್ಮಗಳನ್ನು ಗುರುರೂಪವಾಗಿ ಕಂಡರು. ದತ್ತಗುರುಗಳು ಪೃಥ್ವಿಯನ್ನು ಗುರುವೆಂದು ಸ್ವೀಕರಿಸಿದರು ಮತ್ತು ಪೃಥ್ವಿಯಂತೆ ಸಹನಶೀಲರೂ ಸಹಿಷ್ಣುವೂ ಆಗಿರಬೇಕು ಎಂಬ ಬೋಧನೆ ಪಡೆದರು. ವಾಯುವಿನಿಂದ ವಿರಕ್ತಿಯ ಬೋಧನೆಯನ್ನೂ, ನೀರಿನಿಂದ ಸ್ನೇಹಭಾವದ ಬೋಧನೆಯನ್ನೂ, ಅಗ್ನಿಯಿಂದ ಪಾವಿತ್ರ್ಯದ ಬೋಧನೆಯನ್ನೂ, ಸಮುದ್ರದಿಂದ ಪರೋಪಕಾರದ ಬೋಧನೆಯನ್ನೂ ಪಡೆದುಕೊಂಡರು. ಕ್ಷಮಾಶೀಲತೆ, ಭಕ್ತವಾತ್ಸಲ್ಯ ಇವು ದತ್ತಗುರುಗಳ ವೈಶಿಷ್ಟ್ಯಗಳಾಗಿವೆ.


ದತ್ತಾತ್ರೇಯರು ಗುರುಸ್ವರೂಪದಲ್ಲಿ ಪೂಜಿಸಲ್ಪಡುವ ಏಕಮೇವ ದೇವರಾಗಿದ್ದಾರೆ . ಶ್ರೀಪಾದ ಶ್ರೀವಲ್ಲಭ, ಶ್ರೀ ನೃಸಿಂಹ ಸರಸ್ವತಿ, ಶ್ರೀ ಮಾಣಿಕಪ್ರಭು, ಶ್ರೀ ಸ್ವಾಮಿ ಸಮರ್ಥ, ಶ್ರೀ ಸಾಯಿಬಾಬಾ, ಶ್ರೀ ಭಾಲಚಂದ್ರ ಮಹರಾಜ್ ಇವರೆಲ್ಲರೂ ದತ್ತಾತ್ರೇಯರ ಪ್ರಮುಖ ಅವತಾರಗಳು.


ದತ್ತನಿಂದ ದೇಹದಲ್ಲಿನ ಏಳೂ ಚಕ್ರಗಳ ಶುದ್ಧಿಯಾಗಿ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಪ್ರಶಸ್ತವಾಗುತ್ತದೆ. ಆದ್ದರಿಂದ ದತ್ತನನಿಗೆ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು. ಸಪ್ತಾಹದಲ್ಲಿನ ೭ ವಾರಗಳ ಪೈಕಿ ಗುರುವಾರವು ದತ್ತನಿಗೆ ಸಂಬಂಧಿಸಿದ ವಾರವಾಗಿದೆ. ದತ್ತತತ್ತ್ವದ ಬಣ್ಣವು ಹಳದಿ. ಸಕ್ಕರೆ ಸೇರಿಸಿದ ಹಾಲು ಮತ್ತು ರವೆ ಸಜ್ಜಿಗೆಯು ದತ್ತನಿಗೆ ಪ್ರಿಯವಾದುದು. ಅವಧೂತ ಚಿಂತನ ಶ್ರೀ ಗುರುದೇವ ದತ್ತ ಮತ್ತು ಅಲಖ್ ನಿರಂಜನ್ ಇವು ದತ್ತನಿಗೆ ಸಂಬಂಧಿಸಿದ ಪ್ರಸಿದ್ಧ ಜಯಘೋಷಗಳು. ಮಾಹೂರ್, ಗಿರನಾರ್, ಕಾರಂಜಾ, ಔದುಂಬರ್, ನರಸೋಬಾವಾಡಿ, ಗಾಣಗಾಪುರ, ಕುರವಪುರ, ಪೀಠಾಪುರ, ವಾರಾಣಸಿ, ಶ್ರೀಶೈಲ, ಭಟ್ಟಗಾವ್, ಪಾಂಚಾಳೇಶ್ವರ ಇವು ದತ್ತನ ಕೆಲವು ಪ್ರಮುಖ ಕ್ಷೇತ್ರಗಳು. ದತ್ತನ ಎಲ್ಲ ಕ್ಷೇತ್ರಗಳೂ ಅತ್ಯಂತ ಜಾಗೃತವಾಗಿವೆ. ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದಾಗ ಹಲವಾರು ಭಕ್ತರಿಗೆ ಶಕ್ತಿಯ ಅನುಭೂತಿಯು ಬರುತ್ತದೆ.


ನಾವು ದತ್ತಾರೇಯರ ಚಿತ್ರವನ್ನು ನೋಡಿದರೆ, ಅದರಲ್ಲಿ ಹಿಂದೆ ಹಸು ಮತ್ತು ಔದುಂಬರ ವೃಕ್ಷವಿದೆ ಮತ್ತು ಮುಂದೆ ನಾಲ್ಕು ನಾಯಿಗಳಿವೆ. ದತ್ತನ ಹಿಂದೆ ಇರುವ ಔದುಂಬರ ವೃಕ್ಷವು ದತ್ತನ ಪೂಜನೀಯ ರೂಪವಾಗಿದೆ; ಏಕೆಂದರೆ ಅದರಲ್ಲಿ ದತ್ತತತ್ತ್ವವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಹಸು ಎಂದರೆ ಪೃಥ್ವಿ ಮತ್ತು ನಾಲ್ಕು ನಾಯಿಗಳೆಂದರೆ ನಾಲ್ಕು ವೇದಗಳು. ಇದರ ಅರ್ಥ ದತ್ತಾತ್ರೇಯರು ಜ್ಞಾನಸಂಪನ್ನರಾಗಿದ್ದಾರೆ. ಹಸು ಮತ್ತು ನಾಯಿಗಳು ಒಂದು ವಿಧದಲ್ಲಿ ದತ್ತನ ಅಸ್ತ್ರಗಳೂ ಆಗಿವೆ. ಹಸುವು ಕೊಂಬಿನಿಂದ ಹಾಯ್ದು ಮತ್ತು ನಾಯಿಗಳು ಕಚ್ಚಿ ಶತ್ರುವಿನಿಂದ ರಕ್ಷಿಸುತ್ತಾರೆ. ದತ್ತಾತ್ರೇಯನ ಭುಜದ ಮೇಲೆ ಒಂದು ಜೋಳಿಗೆ ಇರುತ್ತದೆ. ಅದು ಜೇನುನೊಣದ ಪ್ರತೀಕವಾಗಿದೆ. ಜೇನು ನೊಣವು ಹೇಗೆ ಬೇರೆಬೇರೆ ಕಡೆಗಳಿಗೆ ಹೋಗಿ ಜೇನನ್ನು ಸಂಗ್ರಹಿಸುತ್ತದೋ ಹಾಗೆಯೇ ದತ್ತಗುರುಗಳು ಮನೆಮನೆಗೆ ಹೋಗಿ ಭಿಕ್ಷೆಯನ್ನು ಸಂಗ್ರಹಿಸುತ್ತಾರೆ. ಭಿಕ್ಷೆ ಬೇಡುವುದರಿಂದ ಅಹಂ ಬೇಗೆನೆ ಕಡಿಮೆಯಾಗುತ್ತದೆ. ಆದ್ದರಿಂದ ಜೋಳಿಗೆಯು ಅಹಂ ನಷ್ಟವಾಗಿರುವುದರ ಪ್ರತೀಕವಾಗಿದೆ. ಕಮಂಡಲು ಹಾಗೂ ದಂಡ ಇವು ಸಂನ್ಯಾಸಿ ವೃತ್ತಿಯ ಪ್ರತೀಕಗಳಾಗಿವೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ಸಾಮೂಹಿಕ ವಿವಾಹ ಮೇ 03ರಂದು ಸಂಜೆ 6.48ಕ್ಕೆ ನಡೆಯುವ ಗೋದೊಳಿ ಲಗ್ನದಲ್ಲಿ ನಡೆಯಲಿದೆ. ವರನಿಗೆ ದೋತಿ ಶಾಲು ಮತ್ತು ವಧುವಿಗೆ ಸೀರೆ ರವಿಕೆಕಣ ಹಾಗೂ ಮಂಗಳ ಸೂತ್ರ ಹೂವಿನ ಹಾರ ನೀಡಲಾಗುವುದು ಎರಡನೆ ವಿವಾಹಕ್ಕೆ…

    Spread the love

    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕುಕ್ಕೆ ಸುಬ್ರಮಣ್ಯ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡುತ್ತಾ ಉಜಿರೆಯಂಥ ಸಣ್ಣ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಅವಿರತ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    • By admin
    • January 14, 2025
    • 25 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    • By admin
    • January 14, 2025
    • 63 views
    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    • By admin
    • January 14, 2025
    • 22 views
    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    • By admin
    • January 12, 2025
    • 63 views
    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    • By admin
    • January 12, 2025
    • 86 views
    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

    • By admin
    • January 11, 2025
    • 46 views
    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ