ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿಬಿದ್ದು 6 ಮಂದಿ ಮೀನುಗಾರರು ನಾಪತ್ತೆ

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ನಡೆದಿದೆ.

ಬೋಳಾರದ ಶ್ರೀ ರಕ್ಷಾ ಎಂಬ  ಮೀನುಗಾರಿಕಾ ಬೋಟ್ ಸೋಮವಾರ (ನ 30 )  ನಸುಕಿನ ಜಾವ ಮೀನುಗಾರಿಕೆಗೆ  ತೆರಳಿತ್ತು . ನಿನ್ನೆ ರಾತ್ರಿಯೇ ಆಗಮಿಸಬೇಕಿದ್ದ ಈ ಬೋಟ್ ಅಪಘಾತಕ್ಕಿಡಾಗಿದೆ.

READ ALSO

ಮೀನು ಓವರ್ ಲೋಡ್ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರ ಆಳಸಮುದ್ರದಲ್ಲಿ  ಬೋಟ್ ಮಗುಚಿಬಿದ್ದಿದೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 14 ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 6 ಮಂದಿ ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಧಾವಿಸಿದೆ.