ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ 11 ಭಾಷೆಗಳಲ್ಲಿ ಇಂದು ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ

ಮಂಗಳೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ ಇಂದು ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು ಎಂದು ಸನಾತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ‘ಗುರು-ಶಿಷ್ಯ ಪರಂಪರೆಯು ಹಿಂದೂ ಧರ್ಮವು ನೀಡಿದ ಅದ್ವಿತೀಯ ಕೊಡುಗೆಯಾಗಿದೆ. ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಇದೇ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಗುರುಪೂರ್ಣಿಮೆಯ ನಿಮಿತ್ತ ಈ ಶ್ರೇಷ್ಠ ಗುರು-ಶಿಷ್ಯ ಪರಂಪರೆಯ ಸ್ಮರಣೆ ಮಾಡುವುದು ಆವಶ್ಯಕವಾಗಿದೆ. ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ದೇಶಾದ್ಯಂತ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ 5 ಜುಲೈ 2020 ಈ ಗುರುಪೂರ್ಣಿಮೆಯಂದು ನಡೆಸಲಾಗುತ್ತಿದೆ. ಆದರೆ ಸರಕಾರದ ನಿರ್ದೇಶನದಂತೆ ‘ಆನ್‌ಲೈನ್ ಮಾಧ್ಯಮದಿಂದ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

READ ALSO

ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ತೆಲುಗು, ತಮಿಳು ಮತ್ತು ಮಲ್ಯಾಳಂ ಈ 11 ಭಾಷೆಗಳಲ್ಲಿ ಜುಲೈ 5 ರ ಸಾಯಂಕಾಲ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಪ್ರಸಾರ ಮಾಡಲಾಗುವುದು. ಮಹೋತ್ಸವದಲ್ಲಿ ಶ್ರೀವ್ಯಾಸಪೂಜೆ, ಶ್ರೀಗುರುಪೂಜೆ, ಸಾಧನೆಯ ಬಗ್ಗೆ ಮಾರ್ಗದರ್ಶನವಿರಲಿದೆ. FaceBook ಅಥವಾ YouTube ಮೂಲಕ ಅದನ್ನು ನೋಡಬಹುದು.

  1. www.FB.com/HJSBengaluru
  2. www.Youtube.com/HJSKarnataka