ಹಿಂದೂ ಧಾರ್ಮಿಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಕನ್ಯಾಡಿ ಶ್ರೀಗಳಿಗೆ ಗೌರವಾರ್ಪಣೆ

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕಲ್ಮಂಜ ಗ್ರಾಮದಲ್ಲಿರುವ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ಕೈಗೊಂಡ ಚಾತುರ್ಮಾಸ್ಯ ವ್ರತ ಸಂದರ್ಭಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ || ಧರ್ಮಸ್ಥಳ ಇದರ ಪದಾಧಿಕಾರಿಗಳು ಗೌರವಿಸಿದರು.

ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ ಪೂಜ್ಯನೀಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಮಕ್ಕಳಿಗೆ ಪ್ರೇರಣೆಯನ್ನು ತುಂಬುವ ಕೆಲಸ, ಆಧ್ಯಾತ್ಮ ಯುತವಾದ ಮೌಲ್ಯಗಳು ಪ್ರೇರಣೆಗಳು ಬರಬೇಕು ಇವತ್ತು ಸಮಾಜ ಸ್ವಲ್ಪ ಹಿಮ್ಮುಖವಾಗಿ ಹೋಗಿದ್ದು ನಮ್ಮ ಯುವ ಜನತೆ ಮೊಬೈಲ್, ಸುಖ ಭೋಗದ ಹಿಂದೆ ಬಿದ್ದಿದ್ದು ಶಾರೀರಿಕ ಸುಖ ಮನಸಿನ ಸುಖ ಎಲ್ಲವೂ, ಆಧ್ಯಾತ್ಮದಿಂದ ಮಾತ್ರ ಸುಖ ಶಾಂತಿ ನೆಮ್ಮದಿ ಪ್ರಾಪ್ತಿಸುತ್ತದೆ.
ನೈಜವಾದ ಧರ್ಮದ ಶಿಕ್ಷಣ ಮಕ್ಕಳಿಗೆ ಸಿಕ್ಕಾಗ ಆ ಮಗು ಧರ್ಮವನ್ನು ಪರಿಪಾಲಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಮಕ್ಕಳಿಗೆ ಯಾವ ವಿಚಾರಧಾರೆಯನ್ನು ನೀಡಿದರು ಅದನ್ನು ಸ್ವೀಕರಿಸುವ ಗುಣ ಮಗುವಿಗೆ ಇದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ. ಗಿಡಕ್ಕೆ ಸರಿಯಾಗಿ ಪಾಲನೆ ಪೋಷಣೆ ಮಾಡಿ ಬೆಳೆಸಿದರೆ ಅದು ಹೆಮ್ಮರವಾಗಿ ಬೆಳೆದು ನೆರಳನ್ನು ನೀಡುತ್ತದೆ.
ಹಾಗೆಯೇ ಮಕ್ಕಳಿಗೆ ಬಾಲ್ಯ ಶಿಕ್ಷಣವನ್ನು ಸರಿಯಾಗಿಸಂಸ್ಕಾರಯುತವಾಗಿ ನೀಡಿದರೆ ಆ ಮಗು ದೇಶದ ಸರ್ವಶ್ರೇಷ್ಠ ಪ್ರಜೆಯಾಗುತ್ತಾನೆ. ಮಕ್ಕಳಿಗೆ ಭಗವದ್ಗೀತೆ, ಧರ್ಮದ ವಿಚಾರಗಳನ್ನು ಭೋದಿಸುವ ಕಾರ್ಯ ಆಗಬೇಕಿದೆ. ಮಗುವಿನ ಪೋಷಕರು ಆ ಮಗುವಿನ ಪೂರ್ಣ ಪ್ರಮಾಣದ ಬೆಳವಣಿಗೆಗೆ ಸಹಾಯಕರಾಗುತ್ತಾರೆ. ಮಕ್ಕಳನ್ನು ಒತ್ತಡ ರಹಿತವಾಗಿ ಪ್ರೀತಿಯಿಂದ ಸಾಕಿ ಸಲಹಿ, ಮಹಾಭಾರತ,ರಾಮಾಯಣದ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಹಾಗೂ ಉತ್ತಮ ವಿಚಾರಧಾರೆಗಳನ್ನು ಕಲಿಸುವ ಗುರುಗಳಾಗಿ ಪೋಷಕರು ಪ್ರಮುಖ ಪಾತ್ರವಹಿಸಬೇಕೆಂದರು.

READ ALSO

ಇದೆ ಸಂದರ್ಭ ಓಂಕಾರೇಶ್ವರ ಭಜನಾ ಮಂಡಳಿಯ ಸದಸ್ಯರನ್ನೊಳಗೊಂಡು ಭಜನಾ ಕಾರ್ಯಕ್ರಮ ಮತ್ತು ಶ್ರೀ ಗಣೇಶೋತ್ಸವ ಸಮಿತಿಯು ವಿದ್ಯಾರ್ಥಿಗಳಿಗಾಗಿ ನಡೆಸಿದ ಶ್ಲೋಕ ಕಂಠಪಾಠ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನವನ್ನು ಪೂಜ್ಯನೀಯ ಸ್ವಾಮೀಜಿಯವರು ವಿತರಿಸಿದರು.

ಶ್ರೀ ರಾಮ ಕ್ಷೇತ್ರದ ವ್ಯವಸ್ಥಾಪಕರಾದ ಧರ್ಮಣ್ಣ ಗೌಡ ಸಹಕರಿಸಿದರು.

ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಪಿ , ಕಾರ್ಯದರ್ಶಿ ಗಣೇಶ್ ಬಜಿಲ, ಸಮಿತಿಯ ಪ್ರಮುಖರಾದ ರಾಘವ ಕುರ್ಮಣಿ, ನವೀನ್ ಕನ್ಯಾಡಿ, ವಸಂತ್ ನಾಯ್ಕ, ಪ್ರೀತಮ್ ಧರ್ಮಸ್ಥಳ , ಸುಂದರ ಗೌಡ , ನಿಶಾನ್ ನಾರ್ಯ , ಮಹಾಬಲ ನಾಯ್ಕ, ಸ್ವಸ್ತಿಕ್ ಕನ್ಯಾಡಿ , ಸುಂದರೇಶ್ , ಪುರಂದರ , ಸೃಜನ್ , ರಮೇಶ್ , ಶ್ರೀಮತಿ ಧನಲಕ್ಸ್ಮಿ ಜನಾರ್ಧನ್ , ಶ್ರೀಮತಿ ಚಂದ್ರಾವತಿ , ಶ್ರೀಮತಿ ವೇದಾವತಿ ,ಶ್ರೀಮತಿ ಸುಧಾ , ಶ್ರೀಮತಿ ಯಶೋಧ, ಶ್ರೀಮತಿ ಸುಂದರಿ , ಕು. ಯಶಸ್ವಿನಿ, ಸಂತೋಷ್ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.