‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ದಲ್ಲಿ ‘ದೇವಸ್ಥಾನ ರಕ್ಷಣೆ ಅಭಿಯಾನ’ದ ವಿಚಾರ ಸಂಕಿರಣ!

ಮಂಗಳೂರು: ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ ಕೇಂದ್ರ ಸರಕಾರವು ಕಾಯ್ದೆಯನ್ನು ರೂಪಿಸಬೇಕು ! : ಅನಿಲ ಧೀರ್, ರಾಷ್ಟ್ರೀಯ ಕಾರ್ಯದರ್ಶಿ, ಭಾರತ ರಕ್ಷಾ ಮಂಚ, ಒಡಿಶಾ

ಅಭಿವೃದ್ಧಿಯ ಹೆಸರಿನಲ್ಲಿ ಒಡಿಶಾದಲ್ಲಿ ಅನೇಕ ಮಠಗಳನ್ನು ಅಲ್ಲಿಯ ಸರಕಾರ ನಾಶ ಮಾಡಿದೆ, ಇದರಿಂದ ಅನೇಕ ದೇವಸ್ಥಾನಗಳು ಹಾಗೂ ಪ್ರಾಚೀನ ಗ್ರಂಥಗಳ ಸಂಪತ್ತು ನಾಶವಾಗಿದೆ. ಅನೇಕ ಪ್ರಾಚೀನ ಮೂರ್ತಿಗಳನ್ನೂ ಕದಿಯಲಾಗಿದೆ. ಸ್ಥಳೀಯ ಹಿಂದೂಗಳು ಇದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು; ಆದರೆ ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಮಠ-ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದರಿಂದ ಹಿಂದೂಗಳ ಸಾಂಸ್ಕೃತಿಕ ಭಂಡಾರ ನಾಶವಾಗುತ್ತಿದೆ. ಅದರ ರಕ್ಷಣೆಗಾಗಿ ಕೇಂದ್ರ ಸರಕಾರವು ಕಾಯ್ದೆಯನ್ನು ರೂಪಿಸುವುದು ಅಗತ್ಯವಿದೆ ಎಂದು ಒಡಿಶಾದ ‘ಭಾರತ ರಕ್ಷಾ ಮಂಚ’ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ. ಅನಿಲ ಧೀರ ಇವರು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯು ಆಯೋಜಿಸಿದ್ದ ಆನ್‌ಲೈನ್ 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಹೇಳಿದರು.

ಈ ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ‘ಯೂ-ಟ್ಯೂಬ್ ಚಾನಲ್’ ಹಾಗೂ ‘ಹಿಂದೂ ಅಧಿವೇಶನ’ ಈ ಫೇಸ್‌ಬುಕ್ ಪೇಜ್ ಮೂಲಕ ಲೈವ್ ಪ್ರಸಾರವಾಗುತ್ತಿದ್ದು 54 ಸಾವಿರಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 2 ಲಕ್ಷಕ್ಕೂ ಹೆಚ್ಚು ಜನರ ತನಕ ವಿಷಯ ತಲುಪಿದೆ.


ತೆಲಂಗಾಣದ ಶಿವಸೇನೆಯ ರಾಜ್ಯಾಧ್ಯಕ್ಷ ಶ್ರೀ. ಟಿ.ಎನ್. ಮುರಾರಿ ಇವರು ಮಾತನಾಡುತ್ತಾ, ಸಾಂಸ್ಕೃತಿಕ ಭಂಡಾರವಾಗಿರುವ ದೇವಸ್ಥಾನವನ್ನು ರಕ್ಷಿಸಿದರೆ, ಧರ್ಮದ ರಕ್ಷಣೆಯಾಗುವುದು. ಆದ್ದರಿಂದ ದೇವಸ್ಥಾನ ರಕ್ಷಣೆಗಾಗಿ ಮೋದಿ ಸರಕಾರವು ಒಂದು ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕು ಎಂದು ಹೇಳಿದರು.

‘ಇಟರ್ನಲ್ ಹಿಂದೂ ಫೌಂಡೇಶನ’ನ ಶ್ರೀ. ಸಂಜಯ ಶರ್ಮಾ ಇವರು ಮಾತನಾಡುತ್ತಾ, ದೇವಸ್ಥಾನವು ಸಾಮಾಜಿಕ ಜಾಗೃತಿಯ ಕೇಂದ್ರವಾಗಬೇಕು. ದೇವಸ್ಥಾನದಿಂದ ‘ಸಿ.ಎ.ಎ’, ಎನ್.ಆರ್.ಸಿ.’ ಇತ್ಯಾದಿ ಕಾಯ್ದೆ ಹಾಗೂ ಧರ್ಮದ ಬಗ್ಗೆ ಜಾಗೃತಿಯಾದಲ್ಲಿ ಸ್ವದೇಶಿಯ ಘೋಷಣೆಗೆ ಬಲ ಸಿಗುವುದು. ಇದರಿಂದ ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ದ ಘೋಷಣೆಯ ದಿಕ್ಕಿನತ್ತ ಹೊರಳಬಹುದು ಎಂದು ಹೇಳಿದರು.

ರಾಜಸ್ಥಾನದ ವಾನರ ಸೇನೆಯ ಅಧ್ಯಕ್ಷ ಶ್ರೀ. ಗಜೇಂದ್ರ ಭಾರ್ಗವ ಈ ಸಮಯದಲ್ಲಿ ಮಾತನಾಡುತ್ತಾ, ದೇವಸ್ಥಾನದ ಆಂತರಿಕ ವ್ಯವಸ್ಥೆಯೊಂದಿಗೆ ಬಾಹ್ಯ ವ್ಯವಸ್ಥೆಯೂ ಅಷ್ಟೇ ಮಹತ್ವದ್ದಾಗಿದೆ. ಹೆಚ್ಚಿನ ದೇವಸ್ಥಾನಗಳ ಸ್ಥಳ ಹಾಗೂ ಅಲ್ಲಿಯ ಅಂಗಡಿಗಳು ಆಕ್ರಮಣಕಾರರ ಬೀಡಾಗಿದೆ. ಇದರ ಬಗ್ಗೆ ಹಿಂದೂಗಳು ಚಿಂತನೆ ಮಾಡಬೇಕು. ಹಿಂದೂ ಯುವಕರಿಗೆ ನಮ್ಮ ಸಂಸ್ಕೃತಿಯ ಮಹತ್ವದ ಬಗ್ಗೆ ತಿಳಿಸಿದರೆ ಅವರು ದೇವಸ್ಥಾನದ ರಕ್ಷಣೆಗಾಗಿ ಸಂಘಟಿತರಾಗುವರು ಎಂದು ಹೇಳಿದರು.


ದೇವಸ್ಥಾನಗಳ ಮೇಲಾಗುವ ವಿವಿಧ ಆಘಾತಗಳ ಬಗ್ಗೆ ‘ದೇವಸ್ಥಾನ ರಕ್ಷಣೆ’ ವಿಚಾರ ಸಂಕಿರಣದಲ್ಲಿ ಗಣ್ಯರ ಸಹಭಾಗ !
ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ್ ಸೋಸೈಟಿ’ಯ ಉಪಾಧ್ಯಕ್ಷೆ ಶ್ರೀಮತಿ ಉಮಾ ಆನಂದನ್ ಇವರು ಈ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ, ಚರ್ಚ್ ಮತ್ತು ಮಸೀದಿಗಳಿಗಾಗಿ ಜಗತ್ತಿನಾದ್ಯಂತ ಎಲ್ಲ ಸ್ಥಳಗಳ ನಿಯಮಗಳು ಒಂದೇ ರೀತಿ ಇದೆ; ಆದರೆ ದೇವಸ್ಥಾನಗಳಿಗೆ ಮಾತ್ರ ಬೇರೆ ನಿಯಮಗಳಿವೆ. ಯಾವ ರೀತಿ ಚರ್ಚ್‌ನ ಫಾದರ್ ಹಾಗೂ ಮಸೀದಿಯ ಮೌಲ್ವಿಗಳು ಪ್ರಾರ್ಥನಾಸ್ಥಳಗಳ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ, ಅದರಂತೆ ದೇವಸ್ಥಾನದ ವ್ಯವಸ್ಥಾಪನೆ ಭಕ್ತರಿಗೆ ನೀಡಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಆಂಧ್ರಪ್ರದೇಶದ ಇತಿಹಾಸಕಾರರಾದ ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ ಇವರು ಮಾತನಾಡುತ್ತಾ, 100 ವರ್ಷಗಳ ಇತಿಹಾಸವಿರುವ ಮಠ, ದೇವಸ್ಥಾನದೊಂದಿಗೆ ಇತರ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ‘ಸಾಂಸ್ಕೃತಿಕ ಬೀಡು’ ಎಂದು ಘೋಷಿಸಬೇಕು. ಅದೇ ರೀತಿ ಪ್ರಾಚೀನ ದೇವಸ್ಥಾನಗಳ ಪುನರ್‌ನಿರ್ಮಾಣ ಮಾಡುವಾಗ ಧಾರ್ಮಿಕ ಕ್ಷೇತ್ರದ ಗಣ್ಯರ/ಹಿರಿಯರ ಮಾರ್ಗದರ್ಶನವನ್ನು ಪಡೆಯಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಹಾಗೂ ಛತ್ತೀಸಗಡ ರಾಜ್ಯ ಸಂಘಟಕರಾದ ಶ್ರೀ. ಸುನಿಲ ಘನವಟ ಇವರು ಮಾತನಾಡುತ್ತಾ, ದೇವಸ್ಥಾನ ಸಮಿತಿಯಲ್ಲಿ ಆಗುವಂತಹ ಭ್ರಷ್ಟಾಚಾರ, ಇದು ದೇವಸ್ಥಾನ ಸರಕಾರಿಕರಣದ ದುಷ್ಪರಿಣಾಮವಾಗಿದೆ. ಇದನ್ನು ತಡೆಯಲು ದೇವಸ್ಥಾನದ ವಿಶ್ವಸ್ಥರು ಹಾಗೂ ಹಿಂದುತ್ವನಿಷ್ಠರು ಮುಂದೆ ಬಂದು ರಾಷ್ಟ್ರೀಯ ಸ್ತರದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳುವುದು ಅಗತ್ಯವಿದೆ.

ಈ ಸಮಯದಲ್ಲಿ ಶ್ರೀ. ಘನವಟ ಇವರು ಮಾತನಾಡುತ್ತಾ ‘ರಾಮಮಂದಿರದಂತೆ ಕಾಶಿ, ಮಥುರಾದೊಂದಿಗೆ ದೇಶದಾದ್ಯಂತ 40 ಸಾವಿರ ದೇವಸ್ಥಾನಗಳನ್ನು ಮುಕ್ತಗೊಳಿಸಲು ಹಿಂದೂಗಳು ‘ರಾಷ್ಟ್ರೀಯ ದೇವಸ್ಥಾನ-ಸಂಸ್ಕೃತಿ ರಕ್ಷಾ ಅಭಿಯಾನ’ದಲ್ಲಿ ಸಹಭಾಗಿಯಾಗಬೇಕು ಎಂದು ಕರೆ ನೀಡಿದರು.

ಈ ಸಮಯದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಷ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಮಾತನಾಡುತ್ತಾ, ಜಾತ್ಯತೀತವೆಂದು ಹೇಳುವ ಸರಕಾರ ಹಿಂದೂಗಳ ದೇವಸ್ಥಾನಗಳನ್ನು ವಶಕ್ಕೆ ಪಡೆಯುತ್ತದೆ; ಆದರೆ ಮಸೀದಿ ಅಥವಾ ಚರ್ಚ್ ವಶಕ್ಕೆ ಪಡೆಯುವುದಿಲ್ಲ. ದೇವಸ್ಥಾನಗಳ ಹಣವನ್ನು ಇತರ ಧರ್ಮದವರಿಗಾಗಿ ಖರ್ಚು ಮಾಡಲಾಗುತ್ತದೆ. ಸರಕಾರದ ಮಲತಾಯಿ ಧೋರಣೆ ವಿರುದ್ಧ ಹಿಂದೂಗಳು ಒತ್ತಡ ನಿರ್ಮಿಸಬೇಕು ಎಂದು ಹೇಳಿದರು.

Spread the love
  • Related Posts

    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ನ.03 ರಂದು ʼಮಠʼ ಸಿನಿಮಾದ ನಿರ್ದೇಶಕ ಗುರುಪ್ರಸಾದ್‌(52) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಯಾವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಈಗಷ್ಟೇ ಮಾಹಿತಿ ಬರಬೇಕಿದೆ.…

    Spread the love

    ಬೆಳ್ತಂಗಡಿ ತಾಲೂಕಿನ ಎರ್ಮಾಲಪಲ್ಕೆ ಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆ ಎಂಬಲ್ಲಿ ಹಾಲು ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಡಿಡುಪೆ ಕುಕ್ಕಾವು ಕಡೆಯಿಂದ ಹಾಲು ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಮಗುಚಿ ಬಿದ್ದು ಸುಮಾರು 5000ಲೀಟರ್ ಗಿಂತಲೂ ಹೆಚ್ಚು…

    Spread the love

    You Missed

    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    • By admin
    • November 3, 2024
    • 82 views
    ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

    ಬೆಳ್ತಂಗಡಿ ತಾಲೂಕಿನ ಎರ್ಮಾಲಪಲ್ಕೆ ಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ

    • By admin
    • October 31, 2024
    • 78 views
    ಬೆಳ್ತಂಗಡಿ ತಾಲೂಕಿನ ಎರ್ಮಾಲಪಲ್ಕೆ ಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿ

    ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ದರ್ಶನ್ ಗೆ 6ವಾರಗಳ ಕಾಲ ಷರತ್ತು ಬದ್ಧ ಮಧ್ಯಾಂತರ ಜಾಮೀನು ಮಂಜೂರು

    • By admin
    • October 30, 2024
    • 51 views
    ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ದರ್ಶನ್ ಗೆ 6ವಾರಗಳ ಕಾಲ ಷರತ್ತು ಬದ್ಧ ಮಧ್ಯಾಂತರ ಜಾಮೀನು ಮಂಜೂರು

    ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಟ್ಯಾಲಿ ತರಭೇತಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

    • By admin
    • October 26, 2024
    • 53 views
    ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಟ್ಯಾಲಿ ತರಭೇತಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

    ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ‘ಸಿಲ್ವರ್ ಜೂಬ್ಲಿ ಆರ್ಚಡ್ ಪಾರ್ಕ್’ ನಲ್ಲಿ ‘ಫಲಪುಷ್ಪ ಪ್ರದರ್ಶನ

    • By admin
    • October 26, 2024
    • 47 views
    ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ‘ಸಿಲ್ವರ್ ಜೂಬ್ಲಿ ಆರ್ಚಡ್ ಪಾರ್ಕ್’ ನಲ್ಲಿ ‘ಫಲಪುಷ್ಪ ಪ್ರದರ್ಶನ

    ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರ ಆಗ್ರಹಕ್ಕೆ ಸ್ಪಂದಿಸಿದ ರಸ್ತೆ ಸಾರಿಗೆ ನಿಗಮ

    • By admin
    • October 23, 2024
    • 94 views
    ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರ ಆಗ್ರಹಕ್ಕೆ  ಸ್ಪಂದಿಸಿದ ರಸ್ತೆ ಸಾರಿಗೆ ನಿಗಮ